ಬ್ಯಾರಿ ಅಕಾಡೆಮಿ : ಸ್ವರಚಿತ ಕವನಕ್ಕೆ ಆಹ್ವಾನ


ಮಂಗಳೂರು ಮೇ 28 ಕರ್ನಾಟಕ ವಾರ್ತೆ:-  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ 20 ಸಾಲುಗಳಿಗೆ ಮೀರದಂತೆ ಸ್ವರಚಿತ ಬ್ಯಾರಿ ಕವನವನ್ನು ಆಹ್ವಾನಿಸಲಾಗಿದೆ. ‘ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ನಡೆದುಹೋದ ಆಗುಹೋಗುಗಳು’ ಕವನದ ವಿಷಯವಾಗಿರಬೇಕು. ಸ್ವರಚಿತ ಹೊಸ ಕವನವಾಗಿರಬೇಕು. ಈ ಹಿಂದೆ ಎಂದೂ ಪ್ರಕಟವಾಗಿರದ ಬ್ಯಾರಿ ಅಥವಾ ಉಪಭಾಷೆಯಾದ ಬ್ಯಾರಿ ಮಲಾಮೆ ಭಾಷೆಯಾಗಿರಬೇಕು. ಸ್ವರಚಿತ ಕವನವನ್ನು ಜೂನ್ 10 ರೊಳಗೆ ನೇರವಾಗಿ ಅಕಾಡೆಮಿಯ ವಾಟ್ಸಪ್ ನಂಬ್ರ 7483946578 ಗೆ ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, 2ನೇ ಮಹಡಿ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ಕಳುಹಿಸಬೇಕು.
      ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ಸದಸ್ಯ ಜಲೀಲ್ ಮುಕ್ರಿ ಮೊ: 9945479369 ಇವರನ್ನು ಸಂಪರ್ಕಿಸಬಹುದು. ಕವನ ರಚಿಸಿದ ಅದೇ ಹಾಳೆಯಲ್ಲಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪೂರ್ಣ ವಿಳಾಸವನ್ನು ಕಳುಹಿಸಬೇಕು.  ಸ್ಫರ್ಧೆಯ ವಿಜೇತರಿಗೆ ಪ್ರಥಮ ರೂ. 5000/- ದ್ವಿತೀಯ ರೂ. 3000/- ತೃತೀಯ ರೂ.2000/- ಹಾಗೂ 10 ಸಮಾಧಾನಕರ ಬಹುಮಾನ ರೂ.250/-ರಂತೆ ನೀಡಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Comments