ಸರಕಾರ ಇರುವುದು ಸಾಲ ಮೇಳ ಮಾಡಲು ಅಲ್ಲ!;ಐವನ್ ಡಿಸೋಜಮಂಗಳೂರು;ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಸಾಲ ಮೇಳವೇ ಹೊರತು ಬೇರೇನೂ ಅಲ್ಲ. ಅದರಿಂದ ಉದ್ಯಮಿಗಳು, ಕೈಗಾರಿಕೆಗಳಿಗೆ ಒಂದಿಷ್ಟು ಈ ಪ್ಯಾಕೇಜ್‌ನಿಂದ ಲಾಭವಾಗಬಹುದೇ ಹೊರು ಜನಸಾಮಾನ್ಯರಿಗೆ ಏನೂ ಪ್ರಯೋಜನವಾಗದು. ಲಾಕ್‌ಡೌನ್‌ ನಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದಾರೆ. ಮಳೆಯ ಸಂದರ್ಭ ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ನೋಡಲಾಗದು. ಅವರಿಗೆ ಕನಿಷ್ಠ ಐದು ಕೋಟಿ ರೂ. ಖರ್ಚು ಮಾಡಿದ್ದರೆ ಅವರನ್ನು ರೈಲಿನ ಮೂಲಕ ಸುವ್ಯವಸ್ಥಿತವಾಗಿ ಅವರ ಊರುಗಳಿಗೆ ತಲುಪಿಸಬಹು ದಿತ್ತು. ಆದರೆ ಅವರೆಲ್ಲಾ ಇಂದು ದಾರಿಮಧ್ಯೆ ಅಲೆಯುವಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದು.

ನೋಂದಾಯಿತ ರಿಕ್ಷಾ ಚಾಲಕರಿಗೆ 5000 ರೂ.ನಂತೆ ಅವರ ಖಾತೆಗೆ ಹಣ ಹಾಕುವುದಾಗಿ ಹೇಳಿ 9 ದಿನಗಳಾದರೂ ಹಣ ಬಿದ್ದಿಲ್ಲ. ಕಳೆದ ಬಾರಿಯ ನೆರೆ ಸಂತ್ರಸ್ತರು ಕೂಡಾ ಇನ್ನೂ ಬೀದಿಯಲ್ಲಿದ್ದಾರೆ. ಈ ನಡುವೆ ಕೇಂದ್ರ ಸರಕಾರ ಕಷ್ಟಕಾಲದಲ್ಲಿ ತಮ್ಮ ದುಡಿಮೆಯಲ್ಲಿ ಉಳಿಸಿದ ಪಿಎಫ್ ಹಣವನ್ನು ತೆಗೆದು ಖರ್ಚು ಮಾಡುವಂತೆ ಸಲಹೆ ನೀಡುತ್ತದೆ. ಕೋವಿಡ್ ಹೆಸರಿನಲ್ಲಿ ಜನರನ್ನು ಗಂಡಾಂತರಕ್ಕೆ ತಳ್ಳುತ್ತಿದೆ. ಬಿಜೆಪಿ ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.

ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಪರಿಣಾಮಕಾರಿ ಕ್ರಮ ಆಗಿಲ್ಲ. ಬಿಜೆಪಿಯ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಹೊರತುಪಡಿಸಿ ಉಳಿದವರು ಯಾರೂ ಮಾತನಾಡುತ್ತಿಲ್ಲ. ಗಲ್ಫ್ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿರುವ ಕನ್ನಡಿಗರು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದ ಸಂಸದರು ಈ ಬಗ್ಗೆ ಗಂಭೀರವಾಗಿಲ್ಲ ಎಂದು ಅವರು ದೂರಿದರು.

4.0 ಹಂತದ ಲಾಕ್‌ಡೌನ್ ಸಂದರ್ಭ ರಾಜ್ಯ ಸರಕಾರ ತನ್ನ ಬುದ್ಧಿಮತ್ತೆಯನ್ನು ಪ್ರಯೋಗಿಸಿ ಜನಸಾಮಾನ್ಯರಿಗೆ ಯೋಗ್ಯವಾದ ತೀರ್ಮಾನ ವನ್ನು ಕೈಗೊಳ್ಳಬೇಕು. ಮಳೆಗಾಲ ಕೂಡಾ ಆರಂಭವಾಗುವುದರಿಂದ ಈ ಸಂದರ್ಭದಲ್ಲಿ ಸಾಮಾನ್ಯವಾಗಿರುವ ಜ್ವರ, ಶೀತ ಸೇರಿದಂತೆ ಇತರ ರೋಗಗಳಿಗೆ ಅಗತ್ಯವಾದ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡ್ರಗ್ ನಿಯಂತ್ರಣ ಕೇಂದ್ರದ ಮುಂದೆ ತಾನು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಐವನ್ ಡಿಸೋಜಾ ಹೇಳಿದರು.

Comments