ಸ್ಥಳಾಂತರವಾದ ಎಪಿಎಂಸಿಯಲ್ಲಿ ಅವ್ಯವಸ್ಥೆಗೆ ಜಿಲ್ಲಾಡಳಿತದ ವೈಫಲ್ಯ ಕಾರಣ; ಅಬ್ದುಲ್ ರೌಫ್


ಮಂಗಳೂರು ; ಮಂಗಳೂರು ಬೈಕಂಪಾಡಿ ಬಳಿ ಇರುವ ಎಪಿಎಂಸಿ ಗೆ ತಾತ್ಕಾಲಿಕ ಮಂಗಳೂರು ಮಾರುಕಟ್ಟೆಯನ್ನು ಸ್ಥಳಾಂತರವಾಗಿದ್ದು, ಇಲ್ಲಿರುವ ಅವ್ಯವಸ್ಥೆಗೆ ಜಿಲ್ಲಾಡಳಿತದ ಆಡಳಿತ ವೈಫಲ್ಯ ಕಾರಣ ಎಂದು  ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರೌಫ್ ಆರೋಪಿಸಿದ್ದಾರೆ.

 ಸೋಮವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆಗೆ ತರಕಾರಿ ಹಣ್ಣುಹಂಪಲುಗಳು ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ  ಎಂಬುದನ್ನು ಮನಗಂಡ ಕಾಂಗ್ರೆಸ್ ಕಾರ್ಪೊರೇಟರ್ ನಿಯೋಗ ಮಂಗಳವಾರ ಎಪಿಎಂಸಿಗೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
 ಯಾವುದೇ ಮೂಲಭೂತ ಸೌಕರ್ಯವಿಲ್ಲದೇ ಏಕಾಏಕಿ ಯಾರ ಗಮನಕ್ಕೂ ತರದೆ ಸೆಂಟ್ರಲ್ ಮಾರುಕಟ್ಟೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಬಿಜೆಪಿ ಅವರ ಆಡಳಿತಕ್ಕೆ ಅನುಭವ ಇಲ್ಲ ಎಂಬುದಾಗಿ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Comments