ಜಪ್ಪಿನಮೊಗರು: ರಾಜಕಾಲುವೆ ಒತ್ತುವರಿ ತೆರವು


ಮಂಗಳೂರು: ಮಳೆಗಾಲ ಹತ್ತಿರವಾಗುತ್ತಿದ್ದಂತೆ ನಗರದ ರಾಜಕಾಲುವೆಗಳಲ್ಲಿ ಅಕ್ರಮ ರಸ್ತೆ ಸಂಪರ್ಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಂಗಳೂರು ಮಹಾನಗರ ಆರಂಭಿಸಿದೆ.

ಮೇಯರ್ ದಿವಾಕರ ಪಾಂಡೇಶ್ವರ ಹಾಗೂ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ನೇತೃತ್ವದಲ್ಲಿ  ಜಪ್ಪಿನಮೊಗರುವಿನ ಹೆದ್ದಾರಿ ಬದಿಯಲ್ಲಿ ಸ್ಥಳೀಯರ ದೂರಿನ ಮೇರೆಗೆ,ಅಕ್ರಮವಾಗಿ ನಿರ್ಮಿಸಲಾಗಿದ್ದ ರಸ್ತೆಯನ್ನು ತೆರವುಗೊಳಿಸಲಾಯಿತು.

ಜಪ್ಪಿನಮೊಗರುವಿನಲ್ಲಿ ರಾಜಕಾಲುವೆಗೆ ಸಣ್ಣ ಪೈಪ್ ಹಾಕಿ ಮೇಲಿಂದ ರಸ್ತೆ ಮಾಡಲಾಗಿತ್ತು. ಸಣ್ಣ ಪೈಪ್‌ನಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿದ್ದ ಬಗ್ಗೆ ಪಾಲಿಕೆಗೆ ಈ ಹಿಂದೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಂದು ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಸ್ಥಳೀಯ ಮನಪಾ ಸದಸ್ಯೆ ವೀಣಾಮಂಗಳ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

Comments