ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ     ಮಡಿಕೇರಿ :-ಪ್ರತಿ ವರ್ಷ ಜೂನ್ 5 ಕ್ಕೆ, ‘ವಿಶ್ವ ಪರಿಸರ ದಿನಾಚರಣೆ’ಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು ಘೋಷಿಸಿರುವ ವಿಷಯದ ಕುರಿತಾಗಿ ಎಲ್ಲೆಡೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. 
     ಈ ಬಾರಿಯ ಕೇಂದ್ರ ವಿಷಯ: ‘ಜೀವಿವೈವಿಧ್ಯತೆಯನ್ನು ಆಚರಿಸೋಣ’ (Celebrating Biodiversity).  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.  
     ಜೊತೆಗೆ ಲೇಖನ ಬರೆಯಲು ವಿಷಯಗಳು ಇಂತಿವೆ: ಜೀವಿವೈವಿಧ್ಯತೆಯ ರಕ್ಷಣೆಯಿಂದ ಮಾನವನ ಪ್ರಗತಿ, ಕೊರೋನಾ ವೈರಸ್ ಪಿಡುಗು- ನಿಸರ್ಗ ಹಾಗೂ ಜೀವಿವೈವಿಧ್ಯತೆಗೆ ವರದಾನ, ಪರಿಸರ ಸಮತೋಲನೆಯಲ್ಲಿ ಜೀವಿವೈವಿಧ್ಯತೆಯ ಪಾತ್ರ ವಿಚಾರವಾಗಿ ಲೇಖನ ಬರೆಯಬಹುದಾಗಿದೆ
     ನಿಬಂಧನೆಗಳು: ಚಿತ್ರ ಬರೆಯಲು ಂ3 (Standard Size) ಹಾಳೆ ಬಳಸುವುದು, ಕ್ರೆಯಾನ್ಸ್, ಬಣ್ಣದ ಪೆನ್ಸಿಲ್, ಬ್ರಷ್ ಈ ಯಾವುದಾದರೂ ಸಾಮಗ್ರಿಗಳನ್ನು ಬಳಸಿ ಚಿತ್ರ ರಚಿಸಬಹುದು. ಲೇಖಕರು ತಮ್ಮ ಹೆಸರು, ವಿಳಾಸ, ಮೊಬೈಲ್/ ದೂರವಾಣಿ ಇ-ಮೇಲ್ ಹಾಗೂ ಉದ್ಯೋಗದ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರತಿ ವಿಷಯದ ಅತ್ಯುತ್ತಮ ಐದು ಚಿತ್ರಗಳಿಗೆ (6-8, 9-12ನೇ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕ) ನಗದು ಹಾಗೂ  ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. 
       ಲೇಖನ ಸ್ಪರ್ಧೆಗೆ ಸಂಬಂಧಿಸಿದಂತೆ ಒಬ್ಬರು ಒಂದು ವಿಷಯಕ್ಕೆ ಒಂದು ಚಿತ್ರವನ್ನು ಮಾತ್ರ ಬರೆಯಬೇಕು. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು, ಲೇಖನಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಚೇರಿಗೆ ಕಳುಹಿಸಲು ಮೇ 31 ಕೊನೆಯ ದಿನವಾಗಿದೆ. ಲೇಖನಗಳನ್ನು ಕಳಿಸಬೇಕಾದ ಇಮೇಲ್ ವಿಳಾಸ: krvp.info@gmail.com ಅಥವಾ ವಾಟ್ಸ್ ಅಪ್ ಸಂಖ್ಯೆ: 9483549159. ಹೆಚ್ಚಿನ ಮಾಹಿತಿಗೆ 9008442557/ 9483549159/ 9880917831 ಸಂಪರ್ಕಿಸಬಹುದಾಗಿದೆ ಎಂದು.  ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾದ ಗಿರೀಶ್ ಕಡ್ಲೇವಾಡ, ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಸಿ ಅವರು ತಿಳಿಸಿದ್ದಾರೆ.

Comments