ಕೊರೊನಾ ವಾರಿಯರ್ಸ್ ಡಾಕ್ಟರ್, ನರ್ಸ್ ಗಳಿಗೆ ಎರಡು ತಿಂಗಳಿನಿಂದ ಆಗದ ಸಂಬಳ; ಯು. ಟಿ ಖಾದರ್ ಆಕ್ರೋಶ


ಮಂಗಳೂರು; ರಾಜ್ಯ ಸರಕಾರ ಕೊರೊನಾ ವಿಚಾರವನ್ನು ಗಂಭೀರವಾಗಿಲ್ಲ ತೆಗೆದುಕೊಂಡಿಲ್ಲ.ಕೊರೊನಾ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಅಷ್ಟೇ. ಕೊರೊನಾ ವಾರಿಯರ್ಸ್ಗಳಾದ ಎನ್ ಎಚ್ ಎಂ ನಡಿ ನೇಮಕವಾದ ಡಾಕ್ಟರ್ ಹಾಗೂ ನರ್ಸ್‌ಗಳಿಗೆ ಎರಡು ತಿಂಗಳಿನಿಂದ ಸಂಬಳ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅವರ ಜೀವ ಪಣಕಿಟ್ಟು ಹೆಚ್ಚುವರಿ ಕೆಲಸ ಮಾಡಿರುತ್ತಾರೆ. ಕೊರೊನಾ ನಿರ್ಮೂಲನೆಗೆ ದುಡಿಯುವ  23 ಸಾವಿರ ಜನ ವೈದ್ಯರು , ನರ್ಸ್ ಗಳಿಗೆ ತಕ್ಷಣ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಕೊರೊನಾ ವಾರಿಯರ್ ಎಂದರೆ ಅಷ್ಟೇ ಸಾಲಲ್ಲ.ಆಶಾ ಕಾರ್ಯಕರ್ತೆಯರಿಗೂ ಸರಿಯಾಗಿ ಹಣ ಬಿಡುಗಡೆ ಮಾಡಿಲ್ಲ.ಸಿಎಂ ಹೆಚ್ಚುವರಿ ಕೊಡುತ್ತೇವೆ ಅಂತಾರೇ, ಮೊದಲು ಕೊಡುವ ಸಂಬಳ ಕೊಡಿ.ಪ್ರಧಾನಿ ನಿಧಿಯಲ್ಲಿ ಸಂಗ್ರಹವಾದ ಹಣದ ಕುರಿತು ಮಾಹಿತಿ ನೀಡುತ್ತಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

Comments