ಮಂಗಳೂರು ವಲಸೆ ಕಾರ್ಮಿಕರಿಗೆ ಈದ್ ವಿಶೇಷ ಭೋಜನ

ಮಂಗಳೂರು;ಪಶ್ಚಿಮ ಬಂಗಾಳ, ಅಸ್ಸಾಂನ ಬಹುತೇಕ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ವ್ಯವಸ್ಥೆ ಇಲ್ಲದೆ, ಉದ್ಯೋಗವೂ ಇಲ್ಲದೆ  ತಮ್ಮ ಕ್ಯಾಂಪ್  ಗಳಲ್ಲಿ ಸಿಲುಕಿದ್ದಾರೆ. ಅವರಲ್ಲಿ ಬಹುತೇಕರಿಗೆ ಇಂದು ಈದುಲ್ ಫಿತರ್ ಹಬ್ಬ.‌ ಹಬ್ಬದ ಸಂಭ್ರಮ ಇಲ್ಲದೆ ಆತಂಕ, ಬೇಸರದಲ್ಲಿ ಇದ್ದ ಸುಮಾರು 700 ಕ್ಕೂ ಹೆಚ್ಚು ಅಂತಹ ವಲಸೆ ಕಾರ್ಮಿಕರಿಗೆ ಡಿವೈಎಫ್ಐ ಮಾರ್ಗದರ್ಶನದ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ, ಹಾಗೂ ಡಿವೈಎಫ್ಐ ಘಟಕಗಳ ಆಶ್ರಯದಲ್ಲಿ ಈದ್ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಯಿತು. 
ಮಂಗಳೂರು ನಗರದ ವಿವಿದೆಡೆಯಲ್ಲಿರುವ ಅವರ ಕ್ಯಾಂಪ್ ಗಳಿಗೆ ಸಿದ್ದಪಡಿಸಿದ ಹಬ್ಬದ ಅಡುಗೆಯ ಕಿಟ್ ಗಳನ್ನು ವಿತರಿಸಿ ಈದ್ ಶುಭಾಷಯ ಕೋರಲಾಯಿತು.

Comments