ಮಾಸ್ಕ್ ಹಾಕದ ವಿಚಾರದಲ್ಲಿ ಪುತ್ತೂರಿನಲ್ಲಿ ಹೊಡೆದಾಟ


ಮಂಗಳೂರು: ಮಾಸ್ಕ್ ಹಾಕದ ವಿಚಾರದಲ್ಲಿ ರಿಲಯನ್ಸ್ ಸ್ಮಾಟ್೯
ಮಳಿಗೆಯ ಸಿಬ್ಬಂದಿಗಳು ಹಾಗೂ ಗ್ರಾಹಕರ  ನಡುವೆ ಹೊಡೆದಾಟ ನಡೆದಿರುವ ಘಟನೆ 
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.

ಪುತ್ತೂರಿನಲ್ಲಿರುವ ರಿಲಯನ್ಸ್ ಸ್ಮಾಟ್೯ ಮಳಿಗೆಯ ಮುಂಭಾಗದಲ್ಲಿ ಖರೀದಿಗೆ ಅಗಮಿಸಿದ್ದ ಗ್ರಾಹಕನೊಬ್ಬ ಮಾಸ್ಕ್ ಹಾಕದೇ ಸಾರತಿ ಸಾಲಿನಲ್ಲಿ ನಿಂತಿದ್ದ ಕೊರೋನಾ ವೈರಸ್ ಸೋಂಕು ತಡೆಗಟ್ಟಲು ಹಾಗೂ ರಕ್ಷಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಅದ್ರೆ ಮಾಸ್ಕ್ ಧರಿಸದ ಗ್ರಾಹನಿಗೆ ಮಳಿಗೆಯ ಸಿಬ್ಬಂದಿಗಳು ಖರೀದಿಗೆ ಪ್ರವೇಶ ನಿರಾಕರಿಸಿದ್ರು ಇದರಿಂದ  ಅಕ್ರೋಶಗೊಂಡ ಗ್ರಾಹಕ ತನ್ನ ಸ್ನೇಹಿತರ ಜೊತೆ ಸೇರಿ ಮಳಿಗೆಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದು ಎರಡು ತಂಡದ ಮಧ್ಯೆ ಮಾರಾಮಾರಿ ನಡೆದಿದೆ.ಘಟನಾ ಸ್ಥಳಕ್ಕೆ  ಪುತ್ತೂರು ನಗರ ಠಾಣಾ ಪೊಲೀಸರು ಅಗಮಿಸಿ  ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments