ಮಂಗಳೂರಿನ ನೀರುಮಾರ್ಗದ ಮಹಿಳೆಗೆ ಕೊರೊನಾ ದೃಢಮಂಗಳೂರು; ಮಂಗಳೂರಿನ ನೀರುಮಾರ್ಗದ ಮಹಿಳೆಗೆ ಇಂದು ಕೊರೊನಾ ದೃಢಪಟ್ಟಿದೆ.

ಮಂಗಳೂರು ತಾಲೂಕಿನ ನೀರುಮಾರ್ಗ  ಕುಟ್ಟಿಕಾಲದ 40 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಇವರು ಮೇ 10 ರಂದು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದರು. ಮೇ 17 ತೀವ್ರ ಉಸಿರಾಟದ ತೊಂದರೆಯಿಂದ  ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ 55 ಕ್ಕೆ ಏರಿಕೆಯಾಗಿದೆ.

Comments