ಮಂಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಸೇವೆ ಆರಂಭಮಂಗಳೂರು: ರಾಜ್ಯಾದ್ಯಂತ ಬಸ್ ಸೇವೆ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸೇವೆ ಆರಂಭವಾಗಿದೆ.
ಖಾಸಗಿ ಬಸ್ ಸೇವೆ ಇನ್ನೂ ಆರಂಭವಾಗಿಲ್ಲ. 
ಬಸ್ ಸೇವೆ ಆರಂಭದ ಹಿನ್ನೆಲೆಯಲ್ಲಿ  ಮಂಗಳೂರಿನಿಂದ 45 ಬಸ್ ಗಳು ಸೇವೆ ಆರಂಭಿಸಿದೆ. ಬೆಂಗಳೂರು , ಮೈಸೂರು, ಶಿವಮೊಗ್ಗ ಹುಬ್ಬಳಿಗೆ ಬಸ್ ಸೇವೆ ಆರಂಭವಾಗಿದ್ದು ಕ್ಯೂ ನಿಂತು ಪ್ರಯಾಣಿಕರು ಟಿಕೆಟ್ ಖರೀದಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ 29 ಪ್ರಯಾಣಿಕರನ್ನು ಹೊತ್ತುಕೊಂಡು ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ಬೆಳೆಸಿದೆ. ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ ಮತ್ತು 10 ವರ್ಷದ ಕೆಳಗಿನ ಮಕ್ಕಳಿಗೆ ಬಸ್ ಪ್ರಯಾಣಕ್ಕೆ ಅವಕಾಶವಿಲ್ಲ

Comments