ಎಲ್ಲಾ ಧರ್ಮಕ್ಕೂ ಪ್ರಾರ್ಥನ ಮಂದಿರಗಳನ್ನು ತೆರೆಯಲು ಅವಕಾಶ ಕೊಡಬೇಕಿತ್ತು; ಕೆ ಎಂ ಮಸೂದ್


ಮಂಗಳೂರು: ಜೂ 1 ರಿಂದ ದೇವಸ್ಥಾನಗಳು ಓಪನ್ ಮಾಡುವಂತೆ ರಾಜ್ಯ ಸರಕಾರದ ಅದೇಶದ ವಿರುದ್ಧ ಕರಾವಳಿಯಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.ಈ ಬಗ್ಗೆ  ಮಾತನಾಡಿದ
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ  ಕೆ.ಎಸ್ ಎಂ ಮಸೂದ್ 
ಸರಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳ  ಓಪನ್ ವಿಚಾರದಲ್ಲಿ ಸರಕಾರದ ಈ  ಅದೇಶ ಸರಿಯಲ್ಲ, ಎಲ್ಲಾ ಧರ್ಮಕ್ಕೂ ಪ್ರಾರ್ಥನ ಮಂದಿರಗಳನ್ನು ತೆರೆಯಲು ಅವಕಾಶ ಕೊಡಬೇಕಿತ್ತು. ದೇವರು ಒಬ್ಬನೇ. ಧರ್ಮಗಳ‌ ಅರಾಧನೆ ಬೇರೆ .ನಾವೂ ನಮ್ಮ ಪವಿತ್ರ ರಂಜಾನ್ ಸಮಯದಲ್ಲೂ ಕೇಂದ್ರ,ರಾಜ್ಯ ಸರಕಾರದ ಅದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೆವೆ.ಅದರೆ ಇದೀಗ ಸರಕಾರ ಒಂದು ಧರ್ಮಕ್ಕೆ ಮಾತ್ರ ಧಾರ್ಮಿಕ ಕೇಂದ್ರವನ್ನು‌ ಓಪನ್ ಮಾಡುವಂತೆ ಅದೇಶ ಕೊಟ್ಟಿದ್ದು ಸರಿಯ? ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡದೇ,  ಓಪನ್ ಮಾಡುದಾದ್ರೆ ಎಲ್ಲಾ ಧರ್ಮಕ್ಕೂ ಅವಕಾಶ ಮಾಡಿ ಕೊಡಿ ಎಂದು‌
ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Comments