ಸರಳ ಈದುಲ್ ಫಿತ್ರ್; ಮಂಗಳೂರಿನ ಬಾವುಟ ಗುಡ್ಡೆ ಮಸೀದಿಯಲ್ಲಿ ನೀರವ ಮೌನ

ಮಂಗಳೂರು; ಮುಸ್ಲಿಮರ ಈದುಲ್ ಫಿತ್ರ್ ಹಬ್ಬ ಇದ್ದರೂ ಕರಾವಳಿಯಲ್ಲಿ  ನೀರವ ಮೌನ ನೆಲೆಸಿದೆ.

ಪ್ರತೀ ವರ್ಷ ಈದುಲ್ ಫಿತ್ರ್ ವೇಳೆ  ಜನಜಂಗುಳಿ ಇರುತ್ತಿದ್ದ ಮಸೀದಿಗಳು ಖಾಲಿ ಖಾಲಿಯಾಗಿದೆ. ಕೊರೊನಾ ವೈರಸ್ ನಿಂದ ಸರಳವಾಗಿ ಈ ಬಾರಿ ಈದುಲ್ ಫಿತ್ರ್ ಆಚರಿಸಲು ನಿರ್ಧರಿಸಿರುವುದರಿಂದ ಈ ನೀರವ ಮೌನ ನೆಲೆಸಿದೆ‌

ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಜುಮ್ಮಾ ಮಸೀದಿಯಲ್ಲಿ ನೀರವ ಮೌನವಿದ್ದು ಪ್ರತೀ ವರ್ಷ ಹತ್ತು ಸಾವಿರಕ್ಕೂ ಅಧಿಕ ಮಂದಿ ಪ್ರಾರ್ಥನೆಗಾಗಿ ಸೇರುತ್ತಿದ್ದರು . ಆದರೆ ಈ ಬಾರಿ ಮಸೀದಿ ಸುತ್ತಮುತ್ತಲಿನ ರಸ್ತೆ, ಆವರಣ ಎಲ್ಲವೂ ಖಾಲಿ ಖಾಲಿಯಾಗಿದೆ.ವಾಹನ ಸಂಚಾರ, ಜನ ಸಂಚಾರ ಎಲ್ಲವೂ ಸಂಪೂರ್ಣ ಸ್ತಬ್ಧವಾಗಿದೆ.ಮಸೀದಿಯಲ್ಲಿ ಧರ್ಮಗುರುಗಳು, ಪೊಲೀಸರನ್ನು ಬಿಟ್ಟರೆ ಸಂಪೂರ್ಣ ಸ್ತಬ್ಧವಾಗಿದೆ.

Comments