ನೆರೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಕಾಮತ್


ಮಂಗಳೂರು;ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪದಲ್ಲಿ ನೆರೆ ಹಾನಿಯಿಂದ ನಷ್ಟಕ್ಕೊಳಗಾದ ಕುಟುಂಬಗಳಿಗೆ  ಶಾಸಕ‌ ವೇದವ್ಯಾಸ್ ಕಾಮತ್ ಅವರು ಪರಿಹಾರ ಧನ ಚೆಕ್  ವಿತರಿಸಿದರು.

ಈ ಕುರಿತು ಮಾತನಾಡಿದ ಶಾಸಕ ಕಾಮತ್, ಕಳೆದ ವರ್ಷ ಉಂಟಾದ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಪರಿಹಾರ ನಿಧಿಯ ಚೆಕ್ ಬಿಡುಗಡೆಯಾಗಿದ್ದು ಫಲಾನುಭವಿಗಳಿಗೆ ವಿತರಿಸಲಾಗಿದೆ. ಕಂಕನಾಡಿ ವಾರ್ಡಿನ ಭವಾನಿ ಅವರಿಗೆ 19000,  ಯಶವಂತ್ ಅವರಿಗೆ 95100,ಅಬ್ದುಲ್ ಸಲಾಮ್ 5200, ವೆಂಕಪ್ಪ 67100, ವಿಜಯ್ ತೇಜ್ ಪಾಲ್ 5200, ಪದ್ಮಿನಿ ಮುರಳಿಧರ್ ರಾವ್ 5200, ಗಿರಿಜಾ 5200 ರೂಪಾಯಿಗಳ ಚೆಕ್ ವಿತರಿಸಲಾಯಿತು. ಒಟ್ಟು 191000 ರೂಪಾಯಿ ಬಿಡುಗಡೆಯಾಗಿದೆ. ಮಳೆಯಿಂದ ಆಸ್ತಿ ಪಾಸ್ತಿ ನಷ್ಟಕ್ಕೊಳಗಾದ ಕುಟುಂಬಗಳಿಗೆ ನೀಡಿದ ಮಾತಿನಂತೆ ಪರಿಹಾರ ಧನ ಬಿಡುಗಡೆಗೊಳಿಸಲಾಗಿದೆ ಎಂದರು.

ಈ ಸಂಧರ್ಭದಲ್ಲಿ ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಜೆ ಸುರೇಂದ್ರ, ರೂಪಾ ಡಿ ಬಂಗೇರ, ಭಾಸ್ಕರ್ ಚಂದ್ರ ಶೆಟ್ಟಿ, ಕಿರಣ್ ರೈ ಎಕ್ಕೂರು, ಭರತ್ ರಾಜ್ ಶೆಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Comments