ಐದು ರಾಜ್ಯ ಗಳಿಂದ ಕರ್ನಾಟಕಕ್ಕೆ ಬರುವುದಕ್ಕೆ ನಿಷೇಧ ಹೇರಿರುವುದು ಸರಿಯಲ್ಲ; ಮಾಜಿ ಸಚಿವ ಯು ಟಿ ಖಾದರ್


ಮಂಗಳೂರು; ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಮೇಲೆ ನಿಷೇಧ ಹೇರಿರುವ ಸರಕಾರದ ನಿರ್ಧಾರ ಒಕ್ಕೂಟ ವ್ಯವಸ್ಥೆಯಲ್ಲಿ  ಸರಿಯಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.

 ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ನಮ್ಮವರಲ್ಲವೇ? ಎಂದು ಪ್ರಶ್ನಿಸಿದ ಅವರು ಹೊರ ರಾಜ್ಯದ ಕಾರ್ಮಿಕರನ್ನು ಕರೆತರುವ ವಿಚಾರದಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರ ತಪ್ಪು. ಪರವೂರಿನಲ್ಲಿರುವ ಎಲ್ಲ ನಮ್ಮವನ್ನು ಕರೆತರಲು ಸರಕಾರ ತಕ್ಷಣ ಕ್ರಮ ವಹಿಸಬೇಕು. ಅವರನ್ನು ಕುಟುಂಬದಿಂದ ದೂರ ಮಾಡುವ ಕೆಲಸವನ್ನು ಸರಕಾರ ಮಾಡಬಾರದು ಎಂದು ಅವರು ಆಗ್ರಹಿಸಿದರು.

ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ಆರಂಭದಲ್ಲಿ ಸಾಕಷ್ಟು ವ್ಯವಸ್ಥೆ ಇದೆ ಎಂದು ಸಚಿವರು, ಸಂಸದರು ಕೊಚ್ಚಿಕೊಂಡರು. ರೈಲಿನಲ್ಲೂ ವ್ಯವಸ್ಥೆ ಇದೆ ಎಂದು ಹೇಳಿದ್ದರು. ಆದರೆ ಈಗ ಕಾರ್ಮಿಕರನ್ನು ಇಲ್ಲಿಗೆ ಕರೆಸಿ ಕ್ವಾರಂಟೈನ್ ಮಾಡಿಸಲು ಏನು ಸಮಸ್ಯೆ ? ರೈಲಿನಲ್ಲಿ ಮಾಡಿಸಿದ ವ್ಯವಸ್ಥೆ ಈಗ ಎಲ್ಲಿದೆ ಎಂದು ಖಾದರ್ ಪ್ರಶ್ನಿಸಿದರು.

ಇನ್ನು ವಿದೇಶಗಳಿಂದಲೂ ತವರೂರಿಗೆ ಬರುವವರನ್ನು ಕರೆತರುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಲವಾಗಿದೆ. ಕೇರಳಕ್ಕೆ 28 ವಿಮಾನಗಳು ಬಂದರೆ, ಮಂಗಳೂರಿಗೆ ಬಂದದ್ದು ಕೇವಲ ಎರಡೇ ವಿಮಾನ. ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಸಂೂರ್ಣ ವೈಲ್ಯ ಇದಕ್ಕೆ ಕಾರಣ ಎಂದು ಖಾದರ್ ಆರೋಪಿಸಿದರು.

ಕೇರಳ ಕರ್ನಾಟಕ ಗಡಿಭಾಗ ಬಂದ್ ಕುರಿತಂತೆ ಮಾತನಾಡಿದ ಅವರು, ಮಂಗಳೂರಿನ ಶೇ.20ರಷ್ಟು ಮಂದಿ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಾರೆ. ಕಾಸರಗೋಡಿನವರೂ ಇಲ್ಲಿ ಕೆಲಸ ಮಾಡುತ್ತಾರೆ. ಅದೆಷ್ಟೋ ಮಂದಿಗೆ ಈಗ ಕೆಲಸ ಇಲ್ಲ. ದಿನದ ಪಾಸ್ ಮೂಲಕ ಅವರಿಗೆ ಕೆಲಸಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

Comments