ಮಂಗಳೂರಿಗೆ ಸೌದಿ ಅರೇಬಿಯಾ ವಿಮಾನ ನಿಗದಿಯಾಗಿಲ್ಲ: ದ.ಕ ಜಿಲ್ಲಾಧಿಕಾರಿಮಂಗಳೂರು :- ಮಂಗಳೂರಿಗೆ ಸೌದಿ ಅರೇಬಿಯಾ ದೇಶದಿಂದ ಯಾವುದೇ ವಿಮಾನ ಆಗಮನ ಇನ್ನೂ ನಿಗದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
 ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಿದರು. ಮೇ 20 ರಂದು ಮಸ್ಕತ್ ಹಾಗೂ 22 ರಂದು ಕತಾರ್ ನಿಂದ ಮಂಗಳೂರಿಗೆ ವಿಮಾನ ಆಗಮಿಸಲಿದೆ. ದುಬೈ ಯಿಂದ ಎರಡು ವಿಮಾನ ಈಗಾಗಲೇ ಆಗಮಿಸಿದೆ. ಸೌದಿ ಅರೇಬಿಯಾ ದೇಶದಿಂದ ಮಂಗಳೂರಿಗೆ ವಿಮಾನ ಆಗಮನದ ಬಗ್ಗೆ ಇನ್ನೂ ಯಾವುದೇ ನಿಗದಿಯಾಗಿಲ್ಲ ಎಂದು ತಿಳಿಸಿದರು.

Comments