ಮಂಗಳೂರಿನಲ್ಲಿ ರಾಜೀವ್ ಗಾಂಧಿ ಪುಣ್ಯತಿಥಿ ಆಚರಣೆ

ಗಲ್ಪ್ ಕನ್ನಡಿಗ Whstsapp ಗ್ರೂಪ್ join ಆಗಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು; 
ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಯವರ ಪುಣ್ಯತಿಥಿ ಆಚರಣೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆಯಿತು.

 ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ 
ದೇಶದಲ್ಲಿ  ಬಹಳಷ್ಟು ಮಂದಿ ದೇಶವನ್ನಾಳಿದವರು ಅಗಲಿದ್ದಾರೆ. ಅವರೆಲ್ಲರೂ ನಮ್ಮನ್ನಗಲಿದಾಗ ಎಷ್ಟು ನಷ್ಟವಾಗಿದೆಯೋ ಅದಕ್ಕಿಂತ ಹೆಚ್ಚು ನಷ್ಟ ರಾಜೀವ್​ ಗಾಂಧಿಯವರು ಅಗಲಿದಾಗ ಆಗಿದೆ. ಅವರಿಗೆ ಪರ್ಯಾಯವಾಗಿರುವ ನಾಯಕತ್ವ ಅಷ್ಟು ಸುಲಭದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು

 ರಾಜೀವ್ ಗಾಂಧಿ ಅವರ ಜೀವನ ಮತ್ತು ಅವರು ದೇಶಕ್ಕಾಗಿ ಮಾಡಿದ ಸೇವೆಗಳ ಬಗ್ಗೆ ಈ ಸಂದರ್ಭದಲ್ಲಿ  ಸ್ಮರಿಸಿದ್ರು.

ಕಾರ್ಯಕ್ರಮದಲ್ಲಿ ಎಂಎಲ್ಸಿ ಐವನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು

Comments