ಕತಾರ್ ದೋಹದ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಕರಿಲ್ಲ: ಬೆಂಗಳೂರಿನಿಂದ ಹೊರಡದ ವಿಮಾನಮಂಗಳೂರು; ಮಂಗಳೂರಿಗೆ ಇಂದು ಕತಾರ್ ದೋಹದಿಂದ ಬರಬೇಕಿದ್ದ ವಿಮಾನ ಪ್ರಯಾಣಿಕರಿಲ್ಲದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದೆ.
ಕತಾರ್ ದೋಹದಿಂದ ಇಂದು ಸಂಜೆ ಹೊರಟ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮಂಗಳೂರಿಗೆ ಬರಬೇಕಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಯಾವುದೇ ಪ್ರಯಾಣಿಕರಿಲ್ಲದೆ ಇರುವುದರಿಂದ ವಿಮಾನ ಮಂಗಳೂರಿಗೆ ಪ್ರಯಾಣ ಬೆಳೆಸಿಲ್ಲ. ಮೇ 12,18 ರಂದು ದುಬೈನಿಂದ ನೇರ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನವಿದ್ದರೆ ಮೇ 20 ರಂದು ಮಸ್ಕತ್ ನಿಂದ ಬೆಂಗಳೂರು ಮೂಲಕ ವಿಮಾನ ಆಗಮಿಸಿತ್ತು

Comments