ಕಲಬುರಗಿ:ಕೊರೋನಾ ಸೋಂಕಿನಿಂದ ಮತ್ತಿಬ್ಬರು ಗುಣಮುಖಕಲಬುರಗಿ.: ಕೋರೋನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತಿಬ್ಬರು ಗುಣಮುಖರಾಗಿ ಶನಿವಾರ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ 37 ವರ್ಷದ ಯುವಕ (P-642) ಮತ್ತು ಕಲಬುರಗಿ ನಗರದ ಮೋಮಿನಪುರ ಪ್ರದೇಶದ 72 ವರ್ಷದ ವೃದ್ಧ (P-807) ಸೋಂಕಿನಿಂದ ವಾಸಿಯಾಗಿ ಬಿಡುಗಡೆಗೊಂಡವರು.

ಜಿಲ್ಲೆಯಲ್ಲಿ ಇದೂವರೆಗಿನ ಕೊರೋನಾ‌ ಪೀಡಿತ 135ರಲ್ಲಿ 62 ಜನ ಗುಣಮುಖರಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

Comments