ದ.ಕ ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಪೀಡಿತರು ಗುಣಮುಖಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
11 ವರ್ಷದ ಬಾಲಕಿ, 16 ವರ್ಷದ ಬಾಲಕಿ ಮತ್ತು62 ವರ್ಷದ ವ್ಯಕ್ತಿ ಗುಣಮುಖರಾದವರು. ಬೋಳೂರಿನ 11 ವರ್ಷದ ಬಾಲಕಿ ಮತ್ತು 62 ವರ್ಷದ ವ್ಯಕ್ತಿ ಅಜ್ಜ ಮೊಮ್ಮಗಳು. ಈ ಅಜ್ಜನ ಪತ್ನಿ ಕೊರೊನಾದಿಂದ ಸಾವನ್ನಪ್ಪಿದ್ದರು.  ಬಂಟ್ವಾಳದ 16 ವರ್ಷದ ಬಾಲಕಿಯ ತಾಯಿ ಕೊರೊನಾದಿಂದ ಮೃತಪಟ್ಟಿದ್ದರು. ಇವರು ಇಂದು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 
ಈವರೆಗೆ 55 ಮಂದಿ ಕೊರೊನಾ ಪಾಸಿಟಿವ್ ಹೊಂದಿದ್ದು ಇದರಲ್ಲಿ 20 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಸಾವನ್ನಪ್ಪಿದ್ದು 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments