ಮಂಗಳೂರಿನ ಜೆಪ್ಪು ಮಾರ್ಕೆಟ್ ಬಳಿ ಸಿಲಿಂಡರ್ ಸ್ಪೋಟ

ಮಂಗಳೂರು: ಗ್ಯಾಸ್ ಸಿಲಿಂಡರ್ ರಿಪೇರಿ ಮಾಡುವ  ಅಂಗಡಿಯಲ್ಲಿ ಸಿಲಿಂಡರ್​​ ಸ್ಪೋಟಿಸಿದ ಘಟನೆ ನಡೆದಿದೆ.

 ಮಂಗಳೂರಿನ ಜಪ್ಪು ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ. 
ಬೆಂಕಿ ಕಂಡ ತಕ್ಷಣ ಅಂಗಡಿಯೊಳಗಿದ್ದ ಸಿಬ್ಬಂದಿಗಳು  ಸಿಲಿಂಡರನ್ನು ಹೊರಗಡೆ ಎಸೆದ ಪರಿಣಾಮ ಸಿಲಿಂಡರ್  ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 ಸ್ಫೋಟದ ತೀವ್ರತೆಗೆ ಸಿಲಿಂಡರ್​​ನ ತುಂಡುಗಳು ಸುಮಾರು 50 ಮೀಟರ್ ದೂರಕ್ಕೆ ಚಿಮ್ಮಿದೆ. ಒಂದು ತುಂಡು ಜಪ್ಪು ಮೀನು ಮಾರುಕಟ್ಟೆಯ ಒಳಗೆ ಬಿದ್ದಿದೆ. ಅಲ್ಲದೆ ಸಿಲಿಂಡರ್ ಭಾಗಗಳು ಸ್ಫೋಟಗೊಂಡು ಸಿಡಿದ ಪರಿಣಾಮ ಅಲ್ಲೇ ಪಕ್ಕದ ಅಂಗಡಿಯ ಶೆಟರ್ ಗೆ ಹಾನಿಯಾಗಿದೆ‌.

Comments