ದುಬೈ ಸೋಂಕಿತರ ಬಳಿ ಕುಳಿತಿದ್ದವರ ತಪಾಸಣೆ: ಸಿಂಧೂ ರೂಪೇಶ್

                                        ಮಂಗಳೂರು: ಕಳೆದ ಮಂಗಳವಾರ ದುಬೈನಿಂದ ಬಂದಿರುವ ವಿಮಾನದಲ್ಲಿ ಬಂದ 15 ಮಂದಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆ, ಪ್ರಯಾಣದ ವೇಳ ಅವರ ಬಳಿ ಕುಳಿತಿದ್ದವರನ್ನೂ ತಪಾಸಣೆ ಮಾಡಿ ನಿಗಾ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದುಬೈನಲ್ಲಿ ಪ್ರಯಾಣಿಕರನ್ನು ಕೇವಲ ಸ್ಕ್ರೀನಿಂಗ್ ಮಾತ್ರ ಮಾಡುತ್ತಾರೆ. ಯಾವುದೇ ಟೆಸ್ಟ್ ಗಳನ್ನು ಮಾಡುದಿಲ್ಲ. ಮುಂದಿನ ವಿಮಾನದ ಪ್ರಯಾಣಿಕರ ಸಂಪೂರ್ಣ ಪರೀಕ್ಷೆ ಮಾಡಬೇಕಾಗುತ್ತದೆ.  ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Comments