ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿತ್ಯವಾರ ಈದುಲ್ ಫಿತ್ರ್


ಮಂಗಳೂರು; ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ರವಿವಾರ ರಂಜಾನ್ ಹಬ್ಬ ಆಚರಣೆ ಮಾಡಲು  ಮುಸ್ಲಿಂ ಧರ್ಮಗುರುಗಳು ಕರೆ ನೀಡಿದ್ದಾರೆ.
ಇಂದು ರಾತ್ರಿ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ನಾಳೆ ಉಪವಾಸ ಹಿಡಿದು ನಾಡಿದ್ದು ರವಿವಾರದಂದು ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತ್ರ್ ಆಚರಿಸಲು ಮುಸ್ಲಿಂ ಧರ್ಮ ಗುರುಗಳಾದ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್  ತಿಳಿಸಿದ್ದಾರೆ. ರಂಜಾನ್ ಹಬ್ಬ ಮುಸ್ಲಿಮರ ಹಬ್ಬಗಳಲ್ಲಿ ದೊಡ್ಡ ಹಬ್ಬವಾಗಿದ್ದು, ಇದನ್ನು ಮುಸ್ಲಿಮರು ಧರ್ಮದವರು ಒಂದು ತಿಂಗಳ ಕಾಲ ಉಪವಾಸ ಕೈಗೊಂಡು, ನಂತರ ಚಂದ್ರ ದರ್ಶನದ ಆಧಾರದಲ್ಲಿ ಹಬ್ಬವನ್ನು ಆಚರಿಸುತ್ತಾರೆ.

Comments