ಆನ್ ಲೈನ್ ತರಗತಿಗೆ ಪರ್ಯಾಯ ಮಾರ್ಗ ಚಿಂತಿಸಿ: ಎನ್ಎಸ್ ಯು ಐ ಮುಖಂಡ ಅನ್ವಿತ್ ಕಟೀಲ್ ಆಗ್ರಹ


ದಕ್ಷಿಣ ಕನ್ನಡ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ನಡೆಸುತ್ತಿರುವ ಆನ್’ಲೈನ್ ತರಗತಿಗಳಿಂದ ಹಲವಾರು ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಿ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ದಕ್ಷಿಣ ಕನ್ನಡ ಉಪಾಧ್ಯಕ್ಷ ಅನ್ವಿತ್ ಕಟೀಲ್ ಆಗ್ರಹಿಸಿದ್ದಾರೆ.

ಈ ಕುರಿತಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪಕುಲಪತಿಗಳಿಗೆ ಪತ್ರ ಬರೆದಿರುವ ಅವರು, ಹಲವು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ಹಾಗೂ ಇಂಟರ್’ನೆಟ್ ನೆಟ್’ವರ್ಕ್ ತೊಂದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ, ಆನ್’ಲೈನ್ ತರಗತಿಗಳನ್ನು ನಡೆಸಿವುದರಿಂದ ಇಂತಹ ವಿದ್ಯಾರ್ಥಿಗಳು ತರಗತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದ್ದಾರೆ.

ದೇಶದಲ್ಲಿ ಕೊರೋನಾ ಲಾಕ್ ಡೌನ್’ನಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ವಿದ್ಯಾರ್ಥಿಗಳು ಆನ್’ಲೈನ್ ತರಗತಿಯಿಂದ ವಂಚಿತವಾದರೆ ಹೇಗೆ? ದೇಶದಲ್ಲಿ ಯಾವುದೇ ವಿದ್ಯಾರ್ಥಿ ಶಿಕ್ಷಣ ಹಾಗೂ ತನ್ನ ತರಗತಿಯಿಂದ ವಂಚಿತನಾಗಬಾರದು. ಹೀಗಾಗಿ, ಆನ್ ಲೈನ್ ತರಗತಿ ಹೊರತಾಗಿ ಬೇರೆ ಯಾವ ಮಾರ್ಗದ ಮೂಲಕ ನಡೆಸಬಹುದು ಎಂಬುದನ್ನು ಕಂಡುಕೊಳ್ಳಿ ಎಂದು ವಿನಂತಿಸಿದ್ದಾರೆ.

Comments