ಮುಂಬಯಿನಿಂದ ಬಂದು ಮೂಡಬಿದ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ


ಮಂಗಳೂರು; ಮುಂಬಯಿನಿಂದ ಬಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದ್ರೆ ಕಡಂದಲೆಯಲ್ಲಿ ನಡೆದಿದೆ.

ಮೂಡಬಿದಿರೆಯ ಕಡದಂಲೆ ಶಾಲೆಯಲ್ಲಿ ಇವರು ಕ್ವಾರಂಟೈನ್ ನಲ್ಲಿ ಇದ್ದರು. ಮೂಡಬಿದ್ರೆ ಕಡಂದಲೆ ನಿವಾಸಿ
ದಯಾನಂದ ಪೂಜಾರಿ (55) ಆತ್ಮಹತ್ಯೆ ಮಾಡಿಕೊಂಡವರು.

ಕೊವಿಡ್19 ಮತ್ತು ಮುಂದಿನ ಜೀವನೊಪಾಯದ ಬಗ್ಗೆ ಹೆದರಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾತ್ರಿ 1 ಗಂಟೆಗೆ ಕಡಂದಲೆ ಶಾಲೆಯ ಕ್ವಾರಂಟೈನ್ ಮಾಡಲಾಗಿದ್ದ ಇವರು ಬೆಳಗಿನ ಜಾವ 3 ಗಂಟೆ ಹೊತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments