ಮೆಡಿಕಲ್ ಸೈಂಟಿಸ್ಟ್, ರಿಸರ್ಚ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ನೇರ ಸಂದರ್ಶನ


ಹಾವೇರಿ: : ಜಿಲ್ಲಾ ಆಸ್ಪತ್ರೆಯ ಕೋವಿಡ್-19 ವಿ.ಆರ್.ಡಿ.ಎಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಮೆಡಿಕಲ್ ರಿಸರ್ಚ್ ಸೈಟಿಂಸ್ಟ್, ವೈದ್ಯಕೀಯೇತರ ರಿಸರ್ಚ್ ಸೈಂಟಿಸ್, ರಿಸರ್ಚ್ ಅಸಿಸ್ಟೆಂಟ್ ಹಾಗೂ ಲ್ಯಾಬೋಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಸಂದರ್ಶನ ಅಥವಾ ಸ್ಕೈಪ್ ಮೂಲಕ ಸಂದರ್ಶನಕ್ಕೆ ಹಾಜರಾಗಲು ಜಿಲ್ಲಾಧಿಕಾರಿ ಹಾಗೂ ನೇಮಕಾತಿ ಸಮಿತಿ ಅಧ್ಯಕ್ಷರಾದ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ರಿಸರ್ಚ್ ಸೈಟಿಂಸ್ಟ್(ಮೆಡಿಕಲ್) ಹುದ್ದೆಗೆ ಎಂ.ಬಿ.ಬಿ.ಎಸ್.,ಎಂ.ಡಿ,(ಮೈಕ್ರೋಬಯಾಲಜಿ) ಅಥವಾ ಎಂಸ್ಸಿ, ಪಿಎಚ್.ಡಿ ಮೆಡಿಕಲ್ ಮೈಕ್ರೋಬಯಾಲಜಿ ವಿದ್ಯಾರ್ಹತೆ ಹೊಂದಿರಬೇಕು, ಮಾಹೆಯಾನ 65 ಸಾವಿರ ರೂ. ವೇತನ ನೀಡಲಾಗುವುದು. ರಿಸರ್ಚ್ ಸೈಟಿಂಸ್ಟ್(ನಾನ್ ಮೆಡಿಕಲ್) ಹುದ್ದೆಗೆ ಎಂಸ್ಸಿ, ಪಿಎಚ್.ಡಿ ಮೆಡಿಕಲ್ ಮೈಕ್ರೋಬಯಾಲಜಿ ವಿದ್ಯಾರ್ಹತೆ ಪಡೆದಿರಬೇಕು ಮಾಹೆಯಾನ 60 ಸಾವಿರ ರೂ. ನಿಗಧಿತ ವೇತನ ನೀಡಲಾಗುವುದು ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಎಂಸ್ಸಿ, (ಮೆಡಿಕಲ್ ಮೈಕ್ರೋಬಯಾಲಜಿ) ವಿದ್ಯಾರ್ಹತೆ ಪಡೆದಿರಬೇಕು. ಮಾಹೆಯಾನ 30 ಸಾವಿರ ರೂ. ವೇತನ ನಿಗಧಿಪಡಿಸಲಾಗಿದೆ ಹಾಗೂ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಬಿ.ಎಸ್ಸಿ ಎಂ.ಎಲ್.ಟಿ ಅಥವಾ ಪಿಯುಸಿ ಸೈನ್ಸ್ ಡಿಎಂಎಲ್‍ಟಿ ವಿದ್ಯಾರ್ಹತೆ ಹೊಂದಿರಬೇಕು. ಮಾಹೆಯಾನ 25 ಸಾವಿರ ರೂ. ವೇತನ ನಿಗಧಿಮಾಡಲಾಗಿದೆ.
ಮೇಲ್ಕಂಡ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದವರು ಸ್ಕೈಪ್ ಮೂಲಕ ಸಂದರ್ಶನಕ್ಕೆ ಅವಕಾಶವಿದೆ. ಶೈಕ್ಷಣಿಕ ದಾಖಲೆ ಹಾಗೂ ಅನುಭವ ದಾಖಲೆಗಳನ್ನು ಇಮೇಲ್ deo.haveri@gmail.com ಅಥವಾ ಜಿಲ್ಲಾ ಆಸ್ಪತ್ರೆಯ ಮೈಕ್ರೋಬಯಾಲಜಿಸ್ಟ್ ಡಾ.ಶ್ಯಾಮಲಾ ವಾಟ್ಸಾಪ್ ನಂಬರ್ 9480552285 ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ 26 ರಿಂದ ಜೂನ್ 2ರವರೆಗೆ ಬೆಳಿಗ್ಗೆ 11 ಗಂಟೆಗೆg ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು ಅಥವಾ ಸ್ಕೈಪ್ ಆಪ್ ಮೂಲಕ ಸಂದರ್ಶನಕ್ಕೆ ಹಾಜರಾಗಲು ಸದರಿ ದಿನಾಂಕಗಳ ಸಂಜೆ 6 ಗಂಟೆಯೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಯನ್ನು 08375-249044/245015 ಸಂಪರ್ಕಿಸಬಹುದು. ಸಂದರ್ಶನಕ್ಕೆ ಹಾಜರಾಗುವವರಿಗೆ ಪ್ರಯಾಣ ಇತರ ಭತ್ಯೆಗಳನ್ನು ನೀಡುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Comments