ದುಬೈನಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಯ ಮಗು ಸಾವು ಪ್ರಕರಣ; ತನಿಖಾ ತಂಡ ರಚಿಸಿ ಡಿಸಿ ಆದೇಶ


ಮಂಗಳೂರು; ದುಬೈನಿಂದ ಬಂದು ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಐಎಎಸ್ ಅಧಿಕಾರಿ ನೇತೃತ್ವದ ವಿಚಾರಣಾ ಸಮಿತಿಯನ್ನು ದ. ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೇಮಿಸಿದ್ದಾರೆ.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ, ಐಎಎಸ್ ಅಧಿಕಾರಿ ಸ್ನೇಹಲ್.ಆರ್‌ ನೇತೃತ್ವದ 9 ಮಂದಿಯ ಸಮಿತಿಯನ್ನು ನೇಮಿಸಲಾಗಿದೆ.ಗರ್ಭಿಣಿ ಸಂಬಂಧಿ ಅಜೀಜ್ ಬಸ್ತಿಕಾರ್ ದೂರಿನ ಆಧಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ.ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ.

ಮೇ.12ರಂದು ದುಬೈನಿಂದ ಬಂದಿದ್ದ ಗರ್ಭಿಣಿ ಮೊದಲ ಕೋವಿಡ್ ಟೆಸ್ಟ್ ನೆಗೆಟಿವ್ ಬಳಿಕ ಅಪಾರ್ಟ್ ಮೆಂಟ್ ಗೆ ತೆರಳಲು ಬಯಸಿದ್ದರು.ಆದರೆ ಅಪಾರ್ಟ್ ಮೆಂಟ್ ಗೆ ಅಸೋಸಿಯೇಷನ್ ಪ್ರವೇಶ ‌ನಿರಾಕರಿಸಿತ್ತು.ಹೀಗಾಗಿ ಸೂಕ್ತ ಚಿಕಿತ್ಸೆ ಸಿಗದೇ ಗರ್ಭಿಣಿಯ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿತ್ತು.

Comments