ನಳಿನ್ ವಿರುದ್ಧ ಸಾವಿರ ಎಫ್‌ಐಆರ್ ದಾಖಲಿಸಬಹುದು;ರಮಾನಾಥ ರೈ

ಮಂಗಳೂರು; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ಸಾವಿರ  ಎಫ್ ಐ ಆರ್ ದಾಖಲಿಸಬಹುದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಖಂಡಿಸಿದ ಅವರು ಹಾಗಿದ್ದರೆ ಸಂಸದ ನಳಿನ್ ಕುಮಾರ್ ವಿರುದ್ಧ ಸಾವಿರಾರು ಎಫ್‌ಐಆರ್ ದಾಖಲಿಸಬಹುದು.  ನಳಿನ್ ತಿಳುವಳಿಕೆಯಿಲ್ಲದೆ ಮಾತನಾಡುತ್ತಾರೆ, ಅವರ ಮಟ್ಟ ಅಷ್ಟೇ ಎಂದು ಹೇಳಿದರು

Comments