ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಮಂಗಳೂರು:- ಪ್ರತಿ ವರ್ಷದಂತೆ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಯೋಜಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆದರೆ ಈ ವರ್ಷ ಕೋವಿಡ್ 19 ತುರ್ತು ಲಾಕ್‍ಡೌನ್ ಇರುವ ಕಾರಣದಿಂದಾಗಿ ಕಾರ್ಯಕ್ರಮವನ್ನು ಬಹಳ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಧ್ಯೇಯವಾಕ್ಯವಾದ “ ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ರಕ್ಷಣೆ ಮಾಡುವುದು” ಈ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
      ಸ್ಪರ್ಧೆ ವಿವರ ಇಂತಿವೆ: ಪ್ರಬಂದ ಸ್ಪರ್ಧೆ  (3 ಪುಟ ಮೀರದಂತೆ), ಸ್ಪರ್ಧಿಗಳ ವಯಸ್ಸಿನ ಮಿತಿ- 15 ವರ್ಷಕ್ಕಿಂತ ಮೇಲ್ಪಟ್ಟು 20 ವರ್ಷದ ಒಳಗೆ, ಮೊದಲ ಬಹುಮಾನ ರೂ 500, ಎರಡನೇ ಬಹುಮಾನ ರೂ 300, ಮೂರನೇ ಬಹುಮಾನ ರೂ 200 ಆಗಿರುತ್ತದೆ.
  ಚಿತ್ರಕಲಾ ಸ್ಪರ್ಧೆಯ ಸ್ಪರ್ಧಿಗಳ ವಯಸ್ಸಿನ ಮಿತಿ - 15 ವರ್ಷ ಮೀರಿರಬಾರದು, ಮೊದಲ ಬಹುಮಾನ  ರೂ 500, ಎರಡನೇ ಬಹುಮಾನ ರೂ 300, ಮೂರನೇ ಬಹುಮಾನ ರೂ 200 ಆಗಿರುತ್ತದೆ
     ಪ್ರಬಂಧ ಮತ್ತು ಚಿತ್ರಗಳನ್ನು ಬರೆದು ಕಳುಹಿಸಲು ಜೂನ್ 5 ಕೊನೆಯ ದಿನ. ಮಾಧ್ಯಮ ಭಾಷೆ ಕನ್ನಡ ಅಥವಾ ಇಂಗ್ಲೀಷ್ ಆಗಿರಬೇಕು.  
     ಪ್ರಬಂಧ ಮತ್ತು ಚಿತ್ರಗಳನ್ನು   ಜಿಲ್ಲಾ ತಂಬಾಕು ನಿಯಂತ್ರಣಕೋಶ, ಜಿಲ್ಲಾ ಪಂಚಾಯತ್, ಉರ್ವಾಸ್ಟೋರ್, ಮಂಗಳೂರು, ದ.ಕ 575006 ವಿಳಾಸಕ್ಕೆ ಕಳುಹಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2988584 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Comments