ಲೃಾಲದಲ್ಲಿ ದಾನಿಗಳ ನೆರವಿನಿಂದ ಅಹಾರ ಕಿಟ್ ವಿತರಣೆ

 
ದೇಶಕ್ಕೆ ವ್ಯಾಪಿಸಿರುವ ಮಹಾ ಮಾರಿ ಕೊರಾನಾ ವೈರಸ್ ನಿಂದಾಗಿ ಲಾಕ್ ಡೌನ್ ಅದ ಸಂದರ್ಭದ ಅನುಗುಣವಾಗಿ ಲೃಾಲ ಗ್ರಾಮದಲ್ಲಿ  ವೈಯಕ್ತಿಕ ಹಾಗು ದಾನಿಗಳ ನೆರವಿನಿಂದ  ಸಾಮಾಜಿಕ ಅಂತರದಲ್ಲಿ ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲೃಾಲ ರವರು ಸಂಕಷ್ಟಕ್ಕೆ ಸಿಲುಕಿರುವ ಅರ್ಹ ಬಡ 80 ಕುಟುಂಬಗಳಿಗೆ  ಅಹಾರ ಕಿಟ್ಟನ್ನು ಪುತ್ರಬೈಲು, ಗಾಂಧಿ ನಗರ ಹಾಗು ಗುರಿಂಗಾಣ ಭಾಗದ ಜನರಿಗೆ  ಪುತ್ರಬೈಲು ಸಮಾಜ ಮಂದಿರ ವಠಾರದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಕೊಯ್ಯುರ್ ಕ್ರಾಸ್ ಗಣೇಶ್ ಟಯರ್ ಮಾಲಕರಾದ ನವೀನ್ ಪೂಜಾರಿ ಕೊಪ್ಪದ ಬೈಲು, ಎಚ್ ಬಿ ಸೀತಾರಾಮ ಬೆಳ್ತಂಗಡಿ ತಾಲೂಕು  ಬೈರ ಸಮಾಜ ಸೇವಾ‌ ಸಂಘದ ಕೋಶಾಧಿಕಾರಿ, ಬೈರ ಪ್ರೀಮಿಯರ್‌ ಲೀಗ್‌ ಮುಖ್ಯಸ್ಥ ಚಿದಾನಂದ ಪುತ್ರಬೈಲು, ಗೋವಿಂದ ರಾಣ್ಯ ಅಂಬೇಡ್ಕರ್ ನಗರ, ಯಾಕುಬ್ ಕಕ್ಕೇನಾ, ಹನೀಪ್ ಆದರ್ಶ ನಗರ, ಮಾಜಿ ಲೃಾಲ ಗ್ರಾಮ ಪಂಚಾಯತ್ ಸದಸ್ಯೆ ಶಾಹೀದಾ ಬೇಗಂ ಹಾಗು ಸ್ಥಳೀಯರಾದ ಸಂಕಪ್ಪ ಗಾಂಧಿ ನಗರ ಪುತ್ರಬೈಲು,ಸಾವಿತ್ರಿ ಗಾಂಧಿ ನಗರ, ಸಕೀನಾ ಆದರ್ಶ ನಗರ, ಅಬುಸಾಲಿ ಕಕ್ಕೇನಾ, ರಾಮಪ್ಪ ಗಾಂಧಿ ನಗರ, ರಮೇಶ್‌ ಪುತ್ರಬೈಲು, ಉಪಸ್ಥಿತರಿದ್ದರು.

Comments