ಕಾಸರಗೋಡು ಜಿ.ಪಂ ಸದಸ್ಯನಿಂದ ಕರ್ನಾಟಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಪ್ರಕರಣ ದಾಖಲುಮಂಗಳೂರು; ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ  ಹರ್ಷಾದ್ ವರ್ಕಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.

 ಕಾಸರಗೋಡು ಗಡಿಭಾಗ ಕೆದಂಬಾಡಿ ಎಂಬಲ್ಲಿ ಕಾರಿನಲ್ಲಿ ಬರುತ್ತಿದ್ದಾಗ ಕೊಣಾಜೆ ಪೊಲೀಸರು ಕಾರನ್ನು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ‌ಆದರೆ, ತಾನೊಬ್ಬ ಜಿಲ್ಲಾ ಪಂಚಾಯಿತಿ ಮೆಂಬರ್ ಎಂದು ಹೇಳಿ ಪೊಲೀಸರೊಂದಿಗೆ ಚರ್ಚಿಸಿ ದಾಖಲೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಹರ್ಷಾದ್, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಲ್ಲದೆ ನನ್ನ ಕಾರನ್ನು ಚೆಕ್ ಮಾಡಲು ನೀವ್ಯಾರು.. ನಾನು ಕೇರಳದವನು. ನಿಮಗೆ ವಾಹನ ಚೆಕ್ ಮಾಡಲು ರೈಟ್ಸ್ ಇಲ್ಲವೆಂದು  ಹೇಳಿದ್ದಾರೆ. ಪೊಲೀಸರು ನಾವು ಯಾರ ವಾಹನವನ್ನೂ ಚೆಕ್ ಮಾಡ್ತೀವಿ, ಪ್ರಧಾನ ಮಂತ್ರಿ ವಾಹನ ಬೇಕಾದ್ರೂ ಚೆಕ್ ಮಾಡಬಹುದು. ನೀವು ಕರ್ನಾಟಕದಿಂದ ಈ ರಸ್ತೆ ಮೂಲಕ ಬಂದ ಕಾರಣ ಚೆಕ್ ಮಾಡ್ತೀವಿ.. ಹೋಗಲು ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಕರ್ನಾಟಕಕ್ಕೆ ಬಂದಿದ್ದ ಹರ್ಷಾದ್, ಹೈವೇಯಿಂದ ಹೋಗುವ ಬದಲಾಗಿ ಒಳದಾರಿ ಕೆದಂಬಾಡಿ ಮೂಲಕ ತೆರಳಿದ್ದು ಪೊಲೀಸರು ನಿಲ್ಲಿಸಿದಾಗ ದರ್ಪ ತೋರಿದ ವಿಡಿಯೋ ವೈರಲ್ ಆಗಿದೆ. ಈತನ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Comments