ದ.ಕ ಜಿಲ್ಲೆಯಲ್ಲಿ ಇಂದು ಓರ್ವ ಕೊರೊನಾ ರೋಗಿ ಗುಣಮುಖಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ  ಓರ್ವ ಇಂದು ಗುಣಮುಖನಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಮಂಗಳೂರಿನ ಕುಲಶೇಖರ ನಿವಾಸಿ 45 ವರ್ಷದ ವ್ಯಕ್ತಿಗೆ ಎಪ್ರಿಲ್ 23ರಂದು ಕೊರೊನಾ  ದೃಢಪಟ್ಟಿತ್ತು.  ಚಿಕಿತ್ಸೆ ಬಳಿಕ ಅವರು ಗುಣಮುಖರಾಗಿದ್ದಾರೆ.

 ಮಂಗಳೂರಿನಲ್ಲಿ ಇಂದು 333 ಜನರ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನಿಸಲಾಗಿದೆ. ಈ ಹಿಂದೆ ಕಳುಹಿಸಿದ್ದ 502  ವರದಿಯಲ್ಲಿ 496 ಮಂದಿಯಲ್ಲಿ ನೆಗೆಟಿವ್ ಬಂದಿದೆ. 6 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.ಇನ್ನೂ 408 ಮಂದಿಯ ವರದಿ ಬರಬೇಕಿದ್ದು, ಒಟ್ಟು 15 ಮಂದಿ ನಿಗಾದಲ್ಲಿದ್ದಾರೆ. 14 ಮಂದಿಯನ್ನು ಮಂಗಳೂರಿನ ಇಎಸ್ಐ ಹಾಸ್ಪಿಟಲ್​ನ​ ಕ್ವಾರಂಟೈನ್​ನಲ್ಲಿ ಇರಿಸಲಾಗಿದ್ದು, 32 ಮಂದಿಯನ್ನು ಸುರತ್ಕಲ್​ನ ಎನ್ಐಟಿಕೆ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. 
ಈವರೆಗೆ 6,053 ಮಂದಿಯ ಗಂಟಲು ದ್ರವ ಪಡೆಯಲಾಗಿದ್ದು, ಆ ಪೈಕಿ 5,645 ಮಂದಿಯ ವರದಿ ಬಂದಿದೆ. ಅದರಲ್ಲಿ 5,584 ಮಂದಿಯ ನೆಗೆಟಿವ್ ಎಂದಿದೆ. ಜಿಲ್ಲೆಯಲ್ಲಿ  61 ಜನರಲ್ಲಿ ಕೊರೊನಾ ದೃಢಪಟ್ಟಿದ್ದು, 21 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.5 ಮಂದಿ ಸಾವನ್ನಪ್ಪಿದ್ದು 35 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments