ಮಂಗಳೂರಿನಲ್ಲಿ ಸರಳವಾಗಿ ಈದ್ ಉಲ್ ಫಿತ್ರ್ ಆಚರಣೆ


ಮಂಗಳೂರು; ಮಂಗಳೂರಿನಲ್ಲಿ ಇಂದು ಸರಳವಾಗಿ ಈದ್ ಉಲ್ ಪಿತ್ರ್ ಆಚರಿಸಲಾಯಿತು.
ಕೊರೊನಾ ವೈರಸ್ ಹಾವಳಿಯಿಂದ ಈ ಬಾರಿ ಈದ್ ಉಲ್ ಪಿತ್ರನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಅದರಂತೆ ಜಿಲ್ಲೆಯಲ್ಲಿ ಸರಳವಾಗಿ ಈದ್ ಆಚರಣೆ ನಡೆದಿದೆ.
ರಂಜಾನ್ ಮಾಸದ  ಉಪವಾಸ ಮುಗಿದ ಬಳಿಕ ನಡೆಯುವ ಈದ್ ಉಲ್ ಫಿತ್ರ್ ದಿನ ಮುಸ್ಲಿಮರು ಹೊಸ ಬಟ್ಟೆ ಧರಿಸಿ, ಮಸೀದಿಗಳಿಗೆ ತೆರಳಿ , ಪರಸ್ಪರ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸುತ್ತಿದ್ದರು.ಆದರೆ ಈ ಬಾರಿ ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ಇಲ್ಲದೆ ಇರುವುದರಿಂದ ಅವರವರ ಮನೆಯಲ್ಲಿ ನಮಾಜ್ ಮಾಡಿ ಸರಳವಾಗಿ ಹಬ್ಬ ಆಚರಿಸಿದ್ದಾರೆ.

Comments