ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಸಾವುಸುಳ್ಯ; ಕಾರು ಚಾಲನೆ ಮಾಡುತ್ತಿದ್ದ ವೇಳೆ  ಹೃದಯಾಘಾತ  ಸಂಭವಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


 ಕೇನಾಜೆಯ ಪೋಕರ್ ಕುಂಞಿ (55) ಎಂಬವರು ಹೃದಯಾಘಾತದಿಂದ ಮೃತಪಟ್ಟವರು.
ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದ್ದು  ಅವರು ಕಾರಿನಲ್ಲಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ  ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದು ಬಳಿಕ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ  ಕಾರುಚಾಲಕ ಕಾರಿನ ಸ್ಟೇರಿಂಗ್ ಗೆ ತಲೆ ತಗ್ಗಿಸಿ ಬಿದ್ದದನ್ನು ಗಮನಿಸಿದ ಸ್ಥಳೀಯರು  ಕಾರಿನ ಡೋರ್ ತೆಗೆದು ಹ್ಯಾಂಡ್ ಬ್ರೇಕ್ ಹಾಕಿ ಕಾರು ನಿಲ್ಲಿಸಿದ್ದಾರೆ. 

ಬಳಿಕ ಪೋಕರೆ ಕುಂಞಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

Comments