ಕಾಂಗ್ರೆಸ್ ನ ನೀಚ ರಾಜಕೀಯ ಖಂಡನೀಯ; ನಳಿನ್ ಕುಮಾರ್ ಕಟೀಲ್




ಮಂಗಳೂರು; ಪಿ.ಎಂ ಕೇರ್ ಟ್ವಿಟ್  ಮಾಡಿ ಕೊವಿಡ್ 19 ಸಮಯದಲ್ಲೂ ಕಾಂಗ್ರೆಸ್ ಪಕ್ಷ ನೀಚ ರಾಜಕೀಯ ಮಾಡುತ್ತಿರುವುದು  ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಪಿಎಂ ಕೇರ್ ಪಂಡ ಬಗ್ಗೆ ಕಾಂಗ್ರೆಸ್ ಮಾಡಿರುವ ಟ್ವೀಟ್ ಆಧಾರ ರಹಿತ.ಕಾಂಗ್ರೆಸ್ ಪಕ್ಷದ ಬಹತೇಕ ದಿವಾಳಿತನಕ್ಕೆ ಇದು ಸಾಕ್ಷಿ.ಪಿಎಂ ಕೇರ್ ಫಂಡ್‌ ವೈಯಕ್ತಿಕವಾಗಿ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಟ್ಟಿಟ್ ಮಾಡುವ ಮೂಲಜ ಪ್ರಧಾನ ಮಂತ್ರಿ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟು ಮಾಡುವುದು ಅತ್ಯಂತ ಖಂಡನಿಯ ಎಂದಿದ್ದಾರೆ.

ಗಾದೆಯಂತೆ ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿಯಂತೆ ಕಾಂಗ್ರೆಸ್ ಪಕ್ಷ ಮಾತನಾಡುವದು ಭ್ರಷ್ಟಾಚಾರದ ಬಗ್ಗೆ.ಯಾವುದೇ ಆಧಾರವಿಲ್ಲ ಪುಂಕಾನೆ ಪುಂಕಾ ಮಾತನಾಡುವದೇ ಚಾಳಿಯಾಗಿದೇ.ನಿಜವಾಗಿ ಕೊವಿಡ್ ಸಮಯದಲ್ಲೂ ಎಲ್ಲರೂ ಒಂದಾಗಿ ಕೊರೊನಾ ವಿರುದ್ದ ಹೊರಡಬೇಕು.ವಲಸೆ ಕಾರ್ಮಿಕರನ್ನ ಬಿದಿಗಿಳಿಸುವದು.ಜನರಿಗೆ ತಪ್ಪು ದಾರಿ ತೊರಿಸುವಂತ ಕೆಲಸ ಕಾಂಗ್ರೆಸ್ ಪಕ್ಷದವರು ಮಾಡ್ತಾ ಇದ್ದಾರೆ.ಟ್ಟಿಟ್ ಮಾಡಿದ್ದಕೆ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಯಲ್ಲಿ ಸೊನಿಯಾ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.ಕೇಸ್ ಹಿಂಪಡೆಯ ಬೇಕು ಠಾಣಾ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಡಿ.ಕೆ.ಶಿ ಒತ್ತಾಯಿಸಿದ್ದಾರೆ.ಠಾಣಾ ಅಧಿಕಾರಿ ಪ್ರವೀಣ್ ಕೇಸ್ ದಾಖಲು ಮಾಡಿಕೊಂಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ.ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯ ಬಾರದು .ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ದ ಕಠಿಣ ಕ್ರಮ ವಹಿಸಬೇಕು .ಡಿ.ಕೆ ಶಿವಕುಮಾರ್ ಗೆ ಜನರ ಮೇಲೆ ಕಾಳಜಿ ಇದ್ದರೆ ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಮಂಗಳೂರನಲ್ಲಿ ಬಿಜೆಪಿ ರಾಜ್ಯಧ್ಯಕ್ಷ ನಳೀನ ಕುಮಾರ ಕಟೀಲ್ ಹೇಳಿದ್ದಾರೆ.

Comments