ಕೊರೋನಾ ಕಾಲರ್ ಟ್ಯೂನ್ ಗೆ ಧ್ವನಿಯಾಗಿದ್ದು ಕರಾವಳಿಯ ಮಂಗಳೂರು ಬೆಡಗಿಮಂಗಳೂರು: ಕೊರೋನಾ ವೈರಸ್ ಹರಡುದನ್ನು ತಡೆಗಟ್ಟಬಹುದಾಗಿದೆ.. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಸ್ಯೂವಿನಿಂದ ನಿಮ್ಮ ಬಾಯಿ ಮುಚ್ಚಿ...ಹೀಗಂತ ಕನ್ನಡಿಗರು ಕಾಲ್ ಮಾಡುವಾಗ ಬರುವ ಕನ್ನಡ ಕಾಲರ್ ಟ್ಯೂನ್ ನಾವು ನೀವೆಲ್ಲ ಕೇಳಿರುತ್ತೀವಿ, ಕೊರೋನಾ ವಕ್ಕರಿಸಿದ ಮೇಲೆ ಕೊರೋನಾಗಿಂತ ಜಾಸ್ತಿ ಕಾಡಿದ್ದು ಇದೇ ಕೊರೋನಾ ವಾಯ್ಸ್..ಹೌದು... ಕೊರೊನಾ... ಕೊರೊನಾ... ಕೊರೊನಾ.. ವಿಶ್ವದೆಲ್ಲೆಡೆ ‌ಅದೇ ಸುದ್ದಿ, ಯಾರೊಂದಿಗಾದರೂ ಕಾಲ್ ಮಾಡಿ ನೆಮ್ಮದಿಯಿಂದ ಮಾತಡೋಣ ಅಂದ್ರೂ, ಮೊದಲು ಬರೋದು ಕೂಡ ಕೊರೋನಾ‌ ತಡೆಗಟ್ಟಿ ಎನ್ನುವ ಕಾಲರ್ ಟ್ಯೂನ್.... ಹಲವು ಮಂದಿ ಇದ್ರಿಂದ ಕಿರಿಕಿರಿ ಅಂತ ಸಾಮಾಜಿಕ ಜಾಲತಾಣದಲ್ಲಿ ಬೇಸರ ಕೂಡ ವ್ಯಕ್ತಪಡಿಸಿದೂ ಇದೆ, ಆದರೆ ಎಲ್ಲರಿಗೂ ಇದರ ಹಿಂದಿನ ಧ್ವನಿ ಯಾರದ್ದು ಅಂತ ಕುತೂಹಲ ‌ಕೂಡ ಇತ್ತು.. ಆದ್ರೀಗ ಯಾರ ಧ್ವನಿ ಅಂತ ಗೊತ್ತಾಗಿದ್ದು, ಕಾಲರ್ ಟ್ಯೂನ್ ಧ್ವನಿ ನೀಡಿದ್ದು ಮತ್ಯಾರು ಅಲ್ಲ ಅವರೇ ನಮ್ಮ ಮಂಗಳೂರ್ ಹುಡುಗಿ,ಬಹುಮುಖ ಪ್ರತಿಭೆ ಮಂಗಳೂರಿನ ಡಾರೆಲ್ ಜೆಸಿಕಾ ಫೆರ್ನಾಂಡಿಸ್... ಮಂಗಳೂರಿನ ಪಡೀಲ್ ನಿವಾಸಿ ದಿವಂಗತ ವೆಲೇರಿಯನ್ ಫೆರ್ನಾಂಡಿಸ್ ಹಾಗೂ ಲವಿನಾ ಫೆರ್ನಾಂಡಿಸ್ ರವರ ಪುತ್ರಿ.
Gulfkannadiga. Com
ಕನ್ನಡದಲ್ಲಿ ಒಟ್ಟು ಮೂರು ಹಂತದಲ್ಲಿ ಜಾಗೃತಿ ಧ್ವನಿ ಬಂದಿದ್ದು,ಅದರಲ್ಲಿ ಮೊದಲನೆಯದ್ದು, ಮಂಗಳೂರಿನ ಪಡೀಲ್ ಮೂಲದ ಡಾಲೇರ್ ಜೆಸಿಂತಾ ಫೆರ್ನಾಂಡೀಸ್ ಅವರದ್ದು. ಎಂಪಿಎಡ್ ಪದವಿ ಪಡೆದ ಇವರು ಸ್ವಲ್ಪ ಸಮಯ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.ನಂತರ 2013ರಲ್ಲಿ ದೆಹಲಿಯ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಇವರ ಧ್ವನಿಯನ್ನು ಗುರುತಿಸಿದ ಶಾಲಾ ಸಂಚಾಲಕರಾಗಿದ್ದ ವಾಯ್ಸ್ ಓವರ್ ಆರ್ಟಿಸ್ಟ್ ಕೃಷ್ಣ ಭಟ್ ಎಂಬುವವರು, ಜೆಸಿಂತಾ ಫೆರ್ನಾಂಡೀಸ್ ಅವರಿಗೆ ವಾಯ್ಸ್ ಓವರ್ ನೀಡಲು ಅವಕಾಶ ಮಾಡಿಕೊಟ್ಟರು. (Gulfkannadiga. Com)
ನಂತರ ರೆಡಿಯೋ ಹಾಗೂ ಟಿವಿಗಳಲ್ಲಿ ಬರುವ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ್ದರು. ಹೀಗಾಗಿ ಇವರಿಗೆ ಕೊರೋನಾ ಜಾಗೃತಿಯ ಧ್ವನಿ ನೀಡುವ ಅವಕಾಶ ಒದಗಿ ಬಂದಿತ್ತು.. ಜೆಸಿಂತಾ ಫೆರ್ನಾಂಡೀಸ್ ಅವರ ಪತಿ ಚಂಡಿಗಢದಲ್ಲಿ ಸೈನಿಕರಾಗಿರೋದ್ರಿಂದ  ಜೆಸಿಂತಾ ಫೆರ್ನಾಂಡೀಸ್ ಕೂಡ ಸದ್ಯ ಚಂಡಿಗಢದಲ್ಲಿ ಇದ್ದಾರೆ..
ಇಷ್ಟು ದಿನ ಯಾರದಪ್ಪ‌ ಈ‌ ಧ್ವನಿ ಅಂತ ತಲೆ ಕೆರೆದುಕೊಳ್ಳುವವರಿಗೆ ಇದೀಗ ಉತ್ತರ ಸಿಕ್ಕಿದೆ. ಜಗತ್ತಿಗೆ ಬಾಧಿಸಿದ ಮಹಾಮಾರಿಯನ್ನು ಓಡಿಸಲು ಜಾಗೃತಿಯ ಸಂದೇಶ ಧ್ವನಿ ನೀಡಿದ್ದು,ನಮ್ಮ ಕರಾವಳಿಯ ಯುವತಿ ಅನ್ನೋದು ವಿಶೇಷ. ಇಷ್ಟೇ ಅಲ್ಲದೇ ಡಾರೆಲ್‌ 200ಕ್ಕೂ ಅಧಿಕ ಸರ್ಕಾರದ ವಿವಿಧ ಯೋಜನೆಗಳ ಜಾಹಿರಾತಿಗೆ ಧ್ವನಿ ನೀಡಿದ್ದಾರೆ ಅನ್ನೋದು ವಿಶೇಷ.

Comments