ಮಂಗಳೂರಲ್ಲಿ ಕೊರೋನಾ ಸೋಂಕಿಗೆ ಐದನೇ ಬಲಿ! ವೆಂಟಿಲೇಟರ್ ನಲ್ಲಿದ್ದ ಕುಲಶೇಖರದ ವೃದ್ಧೆ ಮೃತ್ಯು!!


ಮಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿದ್ದ ಕುಲಶೇಖರ ನಿವಾಸಿ 80ರ ಹರೆಯದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಐದಕ್ಕೇರಿದೆ.

ವಾರದಿಂದ ಇವರಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಉಳಿದ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿನ್ನೆ ಮೃತಪಟ್ಟ ಬೋಳೂರಿನ 58ರ ಹರೆಯದ ಮಹಿಳೆ ಹಾಗೂ ಕುಲಶೇಖರ ನಿವಾಸಿ 80 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ಬೋಳೂರಿನ ಮಹಿಳೆ ಮೆದುಳು,ಕ್ಷಯರೋಗ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು ನಿನ್ನೆ ಮೃತಪಟ್ಟರೆ ಇಂದು ಮೃತಪಟ್ಟ ವೃದ್ಧೆ ಮತ್ತವರ ಪುತ್ರನಿಗೂ ಸೋಂಕು ತಗಲಿತ್ತು.

Comments