ಮಂಗಳೂರಿನಲ್ಲಿ ವಲಸೆ ಕಾರ್ಮಿಕರಿಗೆ ಕಳಪೆ ಅಕ್ಕಿ ನೀಡಿಲ್ಲ: ಸ್ಪಷ್ಟನೆ
ಮಂಗಳೂರು: ವಲಸೆ ಕಾರ್ಮಿಕರಿಗೆ ಆಹಾರ ಇಲಾಖೆಯಿಂದ ಸರಬರಾಜು ಮಾಡಿರುವ ಅಕ್ಕಿ ಕಳಪೆಯೆಂದು ಡಿವೈಎಫ್ಐ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಅಕ್ಕಿ ಗೋದಾಮಿನಲ್ಲಿ  ಕಾರ್ಮಿಕ ಇಲಾಖೆ ಪರಿಶೀಲನೆ ನಡೆಸಿದೆ


ಬಳಿಕ ಮಾತನಾಡಿದ ಅಧಿಕಾರಿ
ವಿಲ್ಮಾ ಎಲಿಜಬೆತ್ ತೌರ್ ಅವರು ಅಕ್ಕಿಯ ಗುಣಮಟ್ಟ ಪರಿಶೀಲನೆ ನಡೆಸಿದ ಬಳಿಕವೇ ವಿತರಣೆ ಮಾಡಲಾಗಿದೆ ಎಂದು   ಹೇಳಿದರು.

 ಈಗಾಗಲೇ ದ.ಕ ಜಿಲ್ಲೆಯಾದ್ಯಂತ 21 ಸಾವಿರ ಪ್ಯಾಕೇಟ್ ಅಕ್ಕಿ ವಿತರಿಸಲಾಗಿದೆ. ಯಾವುದೇ ದೂರುಗಳು ಬಂದಿಲ್ಲ. ಆದರೆ ಇತ್ತೀಚಿಗೆ ಜೋಕಟ್ಟೆ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ನೀಡಿರುವ ಅಕ್ಕಿಯಲ್ಲಿ ಹುಳುಗಳು ಕಾಣಿಸಿಕೊಂಡಿದ್ದು, ಕೊಳೆತು ದುರ್ವಾಸನೆ ಬರುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ದೂರು ಬಂದ ಪ್ರದೇಶಕ್ಕೆ ಕಾರ್ಮಿಕ ಇಲಾಖೆಯ ಇನ್ಸ್‌ಪೆಕ್ಟರ್ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈಗ ಅವರಲ್ಲಿ 70 ಪ್ಯಾಕೇಟ್ ಅಕ್ಕಿ ಇತ್ತು. ಅದರಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ. ಈ ಮೊದಲು 30 ಪ್ಯಾಕೇಟ್ ಅಕ್ಕಿ ಕೊಂಡೊಯ್ಯಲಾಗಿತ್ತು. ವಲಸೆ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ ಮೂಲದವರಾಗಿದ್ದು, ಈಗಾಗಲೇ ಅವರು ತಮ್ಮ ತವರು ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಾಗಾಗಿ ನಾವು ಅದನ್ನು ಪರಿಶೀಲನೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.ನಾವು ಮೇ 8ರಂದು ಜೋಕಟ್ಟೆ ಪ್ರದೇಶದ ವಲಸೆ ಕಾರ್ಮಿಕರಿಗೆ ಅಕ್ಕಿ ವಿತರಣೆ ಮಾಡಿದ್ದೇವೆ. ಆದರೆ ಮೇ 12ರಂದು ಈ ದೂರು ಬಂದಿದೆ. ಈ ನಡುವೆ ಅವರು ಅಕ್ಕಿಯನ್ನು ಎಲ್ಲಿ ಇಟ್ಟಿದ್ದರೋ ಗೊತ್ತಿಲ್ಲ‌. ನೀರು ಬಿದ್ದಲ್ಲಿ ಅಕ್ಕಿ ಕೊಳೆತು ಹೋಗುತ್ತದೆ. ಆಹಾರ ಇಲಾಖೆಯ ಗೋದಾಮಿನಿಂದ ಅಕ್ಕಿ ಸರಬರಾಜು ಮಾಡುವಾಗ ಪರಿಶೀಲನೆ ಮಾಡಿ ವಿತರಣೆ ಮಾಡಲಾಗಿದೆ. ಅಲ್ಲದೆ ಅಂದು ಮಧ್ಯಾಹ್ನ ಇಲಾಖೆಯ ಗೋದಾಮಿನಿಂದ ಆಹಾರ ಕೊಂಡೊಯ್ದಾಗ ಮಳೆಯೂ ಇರಲಿಲ್ಲ. ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

Comments