ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ದ ಮಾಜಿ ಸಚಿವ ರಮಾನಾಥ ರೈ ಮನವಿ


ಮಂಗಳೂರು; ಬಂಟ್ವಾಳ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಆಗುವುದನ್ನು ತಡೆಯುವಂತೆ ಕೋರಿ ಜಿಲ್ಲಾಧಿಕಾರಿಗೆ ಮಾಜಿ ಸಚಿವ ರಮಾನಾಥ್ ರೈ ನಿಯೋಗದಿಂದ  ಮನವಿ  ಸಲ್ಲಿಸಲಾಯಿತು.


ಬಂಟ್ವಾಳ ತಾಲ್ಲೂಕಿನಲ್ಲಿ  ಮಾಣಿ , ಕಡೇಶಿವಾಲಯ , ಕರ್ಪೆ,  ಪ್ರದೇಶದಲ್ಲಿ ವ್ಯಾಪಕವಾದ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ . ಕಡೇ ಶಿವಾಲಯದಲ್ಲಿ ಮರಳುಗಾರಿಕೆ ಪಡೆದ ಗುತ್ತಿಗೆದಾರರ ರೊಬ್ಬರು ಇತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆಗೆ ಸಹಕರಿಸುತ್ತಿದ್ದು ಅವರ ಮೂಲಕ ಅಕ್ರಮ ಮರಳುಗಾರಿಕೆಗೆ ನಡೆಯುತ್ತಿದೆ ರಾಜಾರೋಷವಾಗಿ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿಗಾರಿಕೆ ಇಲಾಖೆ ಕಂದಾಯ ಇಲಾಖೆ ಪೊಲೀಸ್ ಇಲಾಖೆ ಇದನ್ನು ನಿಯಂತ್ರಣ ಮಾಡಲು ಯಾವುದೇ ಕ್ರಮಗಳನ್ನು  ತೆಗೆದುಕೊಂಡಿಲ್ಲ  . ಅನೇಕ ಬಾರಿ ಸಂಬಂಧಪಟ್ಟವರಿಗೆ ತಿಳಿಸಿದರು ರಾಜಕೀಯ ಪ್ರಭಾವದಿಂದ ಇದರ ಬಗ್ಗೆ ಕ್ರಮ ಕೈಗೊಳ್ಳಲು ಇಲಾಖೆಯು ನಿಷ್ಕ್ರಿಯವಾಗಿದ್ದಾರೆ .ಅಕ್ರಮ ಮರಳುಗಾರಿಕೆ ದಂಧೆ ಮಾಡುವ ವ್ಯಕ್ತಿಗಳು ಕ್ಷೇತ್ರದ ಶಾಸಕರ ನಿಕಟವರ್ತಿಯಾಗಿದ್ದು ಅವರ ಒತ್ತಡದಿಂದಾಗಿ ಇಲಾಖೆಯು ಕ್ರಮ  ಕೈಗೊಳ್ಳುತ್ತಿಲ್ಲ ಈ ಸಂಬಂಧವಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮನವಿ ಮೂಲಕ ತಿಳಿಸಿದರು

Comments