ದ. ಕ ಜಿಲ್ಲೆಯಲ್ಲಿ ಮುಂಬಯಿ ಥಾಣೆಯಿಂದ ಬಂದ ಮಹಿಳೆಗೆ ಕೊರೊನಾ ದೃಢ

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಓರ್ವ ಮಹಿಳೆಗೆ ಕೊರೊನಾ ದೃಢಪಟ್ಟಿದೆ.
ಮುಂಬಯಿ ಥಾಣೆಯ  ಡೊಂಬಿವಿಲಿಯಿಂದ  ಈ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗೆ ಬಂದಿದ್ದರು. ಮೇ 18 ಕ್ಕೆ ಈ ಮಹಿಳೆ ಬೆಳ್ತಂಗಡಿ ಗೆ ಬಂದಿದ್ದ ಇವರನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಇವರಿಗೆ ಇಂದು ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 62 ಕ್ಕೆ ಏರಿಕೆಯಾಗಿದೆ. ಇದರಲ್ಲಿ 21 ಮಂದಿ ಗುಣಮುಖ ರಾಗಿದ್ದು ಐವರು ಸಾವನ್ನಪ್ಪಿದ್ದರು.36 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments