ದಾವಣಗೆರೆಯಲ್ಲಿ ಕೊರೊನಾದಿಂದ ಐವರು ಗುಣಮುಖ-ಆಸ್ಪತ್ರೆಯಿಂದ ಬೀಳ್ಕೊಡುಗೆ


ದಾವಣಗೆರೆ -
   ಕೊರೊನಾದಿಂದ ಗುಣಮುಖರಾದ 5 ಜನರನ್ನು ಇಂದು ಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಕೊರೊನಾ ಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣ ಗುಣಮುಖರಾಗಿದ್ದು, ಇವರನ್ನು ಇಂದು ಡಿಸಿ, ಎಸ್ಪಿ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
    ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಗುರುವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಪಿ-1483, ಪಿ-1485, ಪಿ-1488 ಜಾಲಿನಗರಕ್ಕೆ ಸಂಬಂಧಟ್ಟವರು. ಪಿ-1485 ಇವರು ಪಿ-667 ರ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದರೆ. ಪಿ-1488 ಇವರು ಪಿ-634 ಸಂಪರ್ಕಿತರಾಗಿದ್ದಾರೆ. ಕಂಟೈನ್‍ಮೆಂಟ್ ಜೋನ್‍ಲ್ಲಿರುವ ಎಪಿಸೆಂಟರ್‍ನ ಅಕ್ಕಪಕ್ಕದ ಮನೆಯವರಲ್ಲಿ ಕಂಡುಬಂದಂತಹ ಒಂದು ಪ್ರಕರಣ ಪಿ-1483 ಆಗಿದ್ದು ಇವರು 15 ವರ್ಷದ ಬಾಲಕನಾಗಿದ್ದಾನೆ ಎಂದು ಮಾಹಿತಿ ನೀಡಿದರು.
    ಕೊರೊನಾದಿಂದ ಗುಣಮುಖರಾದ ಒಟ್ಟು 5 ಜನರನ್ನು ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಐದು ಜನರು ಪಿ-618, 620, 623, 628, 664 ಆಗಿದ್ದಿ ಇವರಲ್ಲಿ ಇಬ್ಬರು ಪುರುಷರು ಹಾಗೂ 3 ಜನ ಹೆಣ್ಣು ಮಕ್ಕಳಾಗಿದ್ದಾರೆ. ಬುಧವಾರ 7 ಜನ, ಇಂದು 5 ಹಾಗೂ ಹಳೆಯ 2 ಜನ ಸೇರಿ ಒಟ್ಟು 14 ಜನರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. 4 ಜನ ಸಾವನ್ನಪ್ಪಿದ್ದು ಒಟ್ಟು 115 ರಲ್ಲಿ 97 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು.
   ಅವರನ್ನು ಕೂಡ ಪ್ರೋಟೊಕಾಲ್ ಪ್ರಕಾರ ಒಳ್ಳೆಯ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನ ಚಿಕಿತ್ಸೆ ಮುಗಿದವರದ್ದು ಮೊತ್ತೊಮ್ಮೆ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ ಎಂದರು.
    ಒಟ್ಟು 1400 ಸ್ಯಾಂಪಲ್ ಫಲಿತಾಂಶದ ವರದಿ ಬರಬೇಕಿದೆ. ಇವತ್ತು 601 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಅದರಲ್ಲಿ ಶಿವಮೊಗ್ಗಕ್ಕೆ 200 ಸ್ಯಾಂಪಲ್ ಕಳುಹಿಸಿ ಕೊಡಲಾಗಿದೆ. ಕೆಲವು ಸ್ಯಾಂಪಲ್‍ಗಳನ್ನು ಖಾಸಗಿ ಆನಂದ್ ಡಯಾಗ್ನೋಸ್ಟಿಕ್ ಸೆಂಟರ್‍ಗೆÉ ಹಾಗೂ ಉಳಿದ 60 ರಿಂದ 70 ಸ್ಯಾಂಪಲ್‍ಗಳನ್ನು ಸ್ಥಳೀಯ ಲ್ಯಾಬ್‍ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂುದ ಬಾಪೂಜಿ ಜೆಜೆಎಂ ಲ್ಯಾಬ್ ತೆರೆಯಲಿದ್ದು, ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
    ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ಲಾಕ್‍ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ. ಹಾಗಾಗಿ ಎಲ್ಲರೂ ಬಹಳಷ್ಟು ಜಾಗರೂಕತೆ ವಹಿಸಬೇಕು. ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸುವ ಮೂಲಕ ಕೊರೊನಾ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.
    ದಾವಣಗೆರೆಯಲ್ಲಿ ಈಗಾಗಲೇ ಸಕ್ರಿಯವಾದ 97 ಪ್ರಕರಣಗಳು  ಆಗಿದೆ. ವೈದ್ಯರು ಹೇಳುವ ಪ್ರಕಾರ ಅವರಲ್ಲಿ 50 ಜನ 14 ದಿನ ಚಿಕಿತ್ಸೆ ಮುಗಿಸಿರುವವರು ಇದ್ದಾರೆ. ಇವರ ಎರಡನೇ ಸುತ್ತಿನ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರೊಟೊಕಾಲ್ ಪ್ರಕಾರ ಅವರನ್ನು ಬಿಡುಗಡೆಗೊಳಿಸುವ ವಿಶ್ವಾಸ ಇದೆ. ಕೇಸ್ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.
      ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಹನುಮಂತರಾಯ ಮಾತನಾಡಿ, ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ನಿವಾಸಿಗಳು ಅನಗತ್ಯವಾಗಿ ಓಡಾಡದೇ ಸಹಕರಿಸಬೇಕು ಎಂದು ಮನವಿ ಮಾಡಿದ ಅವರು ಆರೋಗ್ಯ ತುರ್ತು ಸೇವೆಗಳಿಗೆ ಮಾತ್ರ ಹೊರಹೋಗಲು ಅವಕಾಶವಿದೆ ಎಂದರು.
   ಜಿಲ್ಲೆಯಲ್ಲಿ ಸ್ವಚ್ಚತಾ ಕಾರ್ಯವನ್ನು ಮಹಾನಗರಪಾಲಿಕೆ ನಿರ್ವಹಿಸುತ್ತಿದೆ. ಹೊರ ರಾಜ್ಯದಿಂದ  ದುಡಿಮೆಗಾಗಿ ಕೆಲಸಕ್ಕೆ ಹೋಗಿ ಕೆಲವು ಜನರು ನಮ್ಮ ರಾಜ್ಯಕ್ಕೆ ಮರಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರು ಅವರನ್ನು ರೋಗಿಗಳಂತೆ ಕಾಣುತ್ತಿದ್ದಾರೆ. ಅದು ತಪ್ಪು ಆ ರೀತಿ ಬಂದವರನ್ನು ನಾವು ಜಿಲ್ಲೆ ಮತ್ತು  ಸರ್ಕಾರಿ ಶಾಲೆಗಳಲ್ಲಿ ವೈದ್ಯಕೀಯ ಸೇವೆಯೊಂದಿಗೆ ಕ್ವಾರಂಟೈನ್ ಮಾಡುತ್ತಿದ್ದೇವೆ. ಅವರು ಹೊರ ಹೋಗದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾನೂನನ್ನು ಎಲ್ಲರೂ ಗೌರವಿಸಬೇಕು. ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆ, ಗ್ರಾಮಗಳಿಗೆ ಬಂದವರನ್ನು ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕು ಎಂದರು.
    ಈ ಸಂದರ್ಭದಲ್ಲಿ ಎಸಿ ಮಮತಾ ಹೊಸಗೌಡರ್, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷಚಂದ್ರ, ತಹಶೀಲ್ದಾರ್ ಗಿರೀಶ್ ಇದ್ದರು.

Comments