ಗೋಕಳ್ಳತನ ಪ್ರಕರಣ ಭೇದಿಸಿದ ಪೊಲೀಸರಿಗೆ ಶಾಕ್;ಅತೀ‌ ದೊಡ್ಡ ಅಕ್ರಮ ಕಸಾಯಿಖಾನೆ ಪತ್ತೆಮಂಗಳೂರು;ಗೋಕಳ್ಳತನ ಪ್ರಕರಣ ಭೇದಿಸಿದ ಪೊಲೀಸರಿಗೆ 
ಅತೀ‌ ದೊಡ್ಡ ಅಕ್ರಮ ಕಸಾಯಿಖಾನೆ ಪತ್ತೆಯಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರು‌ ಐತ್ತಕುಮೇರು ನಲ್ಲಿ ಗೋಕಳ್ಳತನ ಪತ್ತೆ ಹಚ್ಚಲು ಪೊಲೀಸರು ತೆರಳಿದ್ದರು.
ವಿಟ್ಲ ಎಸ್.ಐ ವಿನೋದ್ ಎಸ್.ಕೆ ನೇತ್ರತ್ವದ ಪೋಲಿಸರ ತಂಡದ ಕಾರ್ಯಾಚರಣೆ ನಡೆಸಿದಾಗ ಅತಿ ದೊಡ್ಡ ಅಕ್ರಮ ಕಸಾಯಿಖಾನೆ ಪತ್ತೆಯಾಗಿದೆ. ಕಸಾಯಿಖಾನೆಯಲ್ಲಿ
200 ದನದ ಚರ್ಮ,ಏಳು ಗೋವು ಸಿಕ್ಕಿದೆ.  ವಾಹನಗಳ ಸಹಿತ ಇವುಗಳನ್ನು  ವಶಪಡಿಸಿಕೊಳ್ಳಲಾಗಿದೆ. ಕೊಳ್ನಾಡು ಕಟ್ಟತ್ತಿಲ್ಲ ಮಠ ನಿವಾಸಿ ಹ್ಯಾರಿಸ್ ಎಂಬಾತನನ್ನು ಬಂಧಿಸಲಾಗಿದೆ.
ಮೊಯ್ದು ಕುಂಞಿ ಎಂಬುವನ ತೋಟದ ಶೆಡ್ ನಲ್ಲಿ ಈ  ಅಕ್ರಮ ಕಸಾಯಿಖಾನೆ ಕಾರ್ಯಚರಿಸುತ್ತಿತ್ತು.
ದನ ಕಳ್ಳತನ ಮಾಹಿತಿ ಆಧರಿಸಿ ಪೋಲಿಸರ ದಾಳಿ ನಡೆಸಿದಾಗ ಇದು ಬೆಳಕಿಗೆ ಬಂದಿದೆ.ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments