ಕುಂಬಾರಗಡಿಗೆಯ ಬಾಲಕನ ನೆರವಿಗೆ ಸ್ಪಂದಿಸಿದ ಜಿ.ಪಂ.ಅಧ್ಯಕ್ಷರು ಮತ್ತು ಸದಸ್ಯರು


      ಮಡಿಕೇರಿ;, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದ ಬಾಲಕನ ಮನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ.ಹರೀಶ್ ಮತ್ತು ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಂಡೇರಂಡ ಭವ್ಯಾ, ಸಿ.ಕೆ.ಬೋಪಣ್ಣ, ಬಾನಂಡ ಪ್ರತ್ಯು ಅವರು ಭೇಟಿ ನೀಡಿ ಬಾಲಕನ ಸಮಸ್ಯೆಗಳಿಗೆ ಸ್ಪಂದಿಸಿದರು.  
     ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ.ಆನಂದ್ ಅವರಿಗೆ ಕರೆ ಮಾಡಿ ಬಾಲಕನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ಜಿ.ಪಂ.ಅಧ್ಯಕ್ಷರ ತಂಡದಲ್ಲಿ ವೈದ್ಯರಾದ ಡಾ.ಬಿ.ಸಿ.ನವೀನ್ ಕುಮಾರ್ ಅವರು ಉಪಸ್ಥಿತರಿದ್ದರು.

Comments