ಚಿಕ್ಕಮಗಳೂರು:ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ: ಜಿಲ್ಲೆಯಲ್ಲಿರುವ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ಅವಧಿ ಮುಕ್ತಾಯವಾಗಿದ್ದು ಸದರಿ ಹುದ್ದೆಗೆ ೧೦ ವರ್ಷ ವಕೀಲಿ ವೃತ್ತಿ ಪೂರೈಸಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅರ್ಹ ವಕೀಲರು ಅರ್ಜಿ, ವಿಳಾಸ ಹಾಗೂ ಸ್ವ ವಿವರ, ಸೇವಾ ಅನುಭವದ ಬಗ್ಗೆ ದಾಖಲೆ, ವಿದ್ಯಾರ್ಹತೆ ದಾಖಲೆ, ಸ್ಟೇಟ್ ಮತ್ತು ಜಿಲ್ಲಾ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರುವ ಬಗ್ಗೆ ದಾಖಲೆ, ಜನನ ಪ್ರಮಾಣ ಪತ್ರ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಒಳಗೊಂಡ ದಾಖಲೆಗಳನ್ನು ೧೦ ದಿನದೊಳಗಾಗಿ ಕಛೇರಿಗೆ ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Comments