ಕಲಬುರಗಿ:ಕೊರೋನಾ ಸೋಂಕಿನಿಂದ ಖೂಬಾ ಪ್ಲಾಟ್ ನಿವಾಸಿ ಗುಣಮುಖ


ಕಲಬುರಗಿ.: ಕಲಬುರಗಿ ನಗರದ ಖೂಬಾ ಪ್ಲಾಟ್ ನಿವಾಸಿಯಾದ 45 ವರ್ಷದ ಪುರುಷ (P-926) ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮಂಗಳವಾರ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಇದರಿಂದ ಕೊರೋನಾ ಪೀಡಿತ 157 ಜನರಲ್ಲಿ 73 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದ್ದು, 77 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

ಮಂಗಳವಾರ ಯಾವುದೇ ಕೊರೋನಾ ಕೇಸ್ ಇಲ್ಲ: ಇನ್ನೂ ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಹೊಸ ಕೊರೋನಾ ಕೇಸ್ ಪತ್ತೆಯಾಗಿಲ್ಲ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

Comments