ಮಾವಿನ ಕಾಯಿ ಕೊಯ್ಯಲು ಹೋದ ಯುವಕನಿಗೆ ವಿದ್ಯುತ್ ಶಾಕ್ ತಗುಲಿ ಮೃತ್ಯು

   

ಸುಳ್ಯ; ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಯುವಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಘಟನೆ ನಡೆದಿದೆ.


ಕೊಡಿಯಾಲ ಗ್ರಾಮದ  ನಿಶಾಂತ್ (17 ವರ್ಷ) ಮೃತಪಟ್ಟ ಯುವಕ .

 ಮನೆಯ ಸಮೀಪದ ಮಾವಿನ ಮರದಿಂದ ಅಲ್ಯುಮಿನಿಯಂ ಗಳೆಯಿಂದ ಮಾವಿನ ಹಣ್ಣನ್ನು ಕೊಯ್ಯುತ್ತಿರುವಾಗ ಸಮೀಪವಿದ್ದ ವಿದ್ಯುತ್ ತಂತಿಗಳಿಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಈತ ಪಂಜ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.

Comments