ಗುಲಾಬಿ ಕಾಯಿ ಕೊರಕದ ಕೀಟ ನಿರ್ವಹಣೆ: ರೈತರಿಗೆ ತಾಂತ್ರಿಕ ಸಲಹೆಗಳುಕಲಬುರಗಿ.:-ಪ್ರಸಕ್ತ 2020 ರ ಮುಂಗಾರು ಹಂಗಾಮಿಗೆ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ಕೀಟ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕ್ಕೆ ಕ್ರಮವಾಗಿ ರೈತರು ಕೆಳಕಂಡ ತಾಂತ್ರಿಕ ಸಲಹೆಗಳನ್ನು ಅನುಸರಿಸಬೇಕೆಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲಕುಮಾರ ಜವಳಗಿ ಅವರು ತಿಳಿಸಿದ್ದಾರೆ.

ರೈತರು ತಮ್ಮ ಹೊಲದಲ್ಲಿ ಹತ್ತಿ ಗಿಡಗಳು ಇರದಂತೆ ನೋಡಿಕೊಳ್ಳುವ ಮೂಲಕ ಈ ಗುಲಾಬಿ ಕೀಟದ ಹಾವಳಿ ಬಹಳಷ್ಟು ಕಡಿಮೆ ಮಾಡಬಹುದಾಗಿದೆ. ಕೀಟಬಾಧೆ ಅತಿಯಾಗಿ ಭಾದಿಸುವ ಪ್ರದೇಶಗಳಲ್ಲಿ ಬೆಳೆ ಪರಿವರ್ತನೆ ಮಾಡುವುದು ಸೂಕ್ತ. ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದರಿಂದ ಕೋಶಗಳನ್ನು ಮತ್ತು ಸೂಪ್ತಾವಸ್ಥೆಯಲ್ಲಿರುವ ಮರಿಹುಳುಗಳನ್ನು ಹೊರ ಒಡ್ಡುವುದರಿಂದ ಮರಿ ಹುಳುಗಳು ಬಿಸಿಲಿನ ತಾಪಕ್ಕೆ ಸಾಯುತ್ತವೆ.

ಬಿತ್ತನೆ ಸಮಯದಲ್ಲಿ ಬಿ.ಟಿ. ರಹಿತ (ನಾನ್ ಬಿ.ಟಿ) ಹತ್ತಿಯ ಬೀಜವನ್ನು ಹೊಲದ ಬದುವಿನ ಸುತ್ತಲೂ 4-5 ಸಾಲುಗಳಲ್ಲಿ ಬಿತ್ತಬೇಕು. ಇದರಿಂದ ನಿರೋಧಕತೆ ಬೆಳೆಸಿಕೊಂಡು ಕೀಟಬಾಧೆಯನ್ನು ತಡೆಗಟ್ಟಬಹುದಾಗಿದೆ. ಹತ್ತಿ ಬೆಳೆ ಅತೀ ಬೇಗನೆ ಬಿತ್ತನೆ ಮಾಡುವುದರಿಂದ ಗುಲಾಬಿ ಕಾಯಿ ಕೊರಕದ ಕೀಟ ಬಾಧೆ ಜಾಸ್ತಿಯಾಗುತ್ತಿದ್ದು, ರೈತರು ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಬೇಕೆಂದು ಅವರು ತಿಳಿಸಿದ್ದಾರೆ

Comments