ಇಂದಿನಿಂದ ಮಂಗಳೂರಿನಿಂದ ಚೆನ್ನೈ ಮುಂಬಯಿ ಬೆಂಗಳೂರಿಗೆ ವಿಮಾನಯಾನ ಆರಂಭಮಂಗಳೂರು: ಕೊರೊನಾದಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಮತ್ತೆ ಆರಂಭಿಸಲು ವಿಮಾನ ಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಿಂದ ಬೆಂಗಳೂರು ಮುಂಬೈ, ಚೆನ್ನೈಗೆ ವಿಮಾನಗಳ ಹಾರಾಟ ಆರಂಭವಾಗಿದೆ

ಇಂದಿನಿಂದ ಮಂಗಳೂರಿನಿಂದ ಇಂಡಿಗೋದ 3 ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದೆ. ಸ್ಪೈಸ್ ಜೆಟ್​​​ನ 3 ವಿಮಾನಗಳು ಬೆಂಗಳೂರು, ಮುಂಬೈಗೆ ಸಂಚರಿಸಲಿದೆ.
ಮುಂಬೈನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 7.05ಕ್ಕೆ, ಇಂಡಿಗೋ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಹೊರಡಲಿವೆ. ಮಂಗಳೂರಿನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9.05ಕ್ಕೆ , ಇಂಡಿಗೋ 11.40 ಕ್ಕೆ ತೆರಳಲಿದೆ. ಚೆನ್ನೈನಿಂದ ಮಂಗಳೂರಿಗೆ ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ.ಬೆಂಗಳೂರಿನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8.30ಕ್ಕೆ, ರಾತ್ರಿ 7 ಗಂಟೆಗೆ ಮತ್ತು ಇಂಡಿಗೋ ವಿಮಾನ ಸಂಜೆ 5.55ಕ್ಕೆ,  ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 10.20ಕ್ಕೆ, ರಾತ್ರಿ 9.35 ಹಾಗೂ ಇಂಡಿಗೋ ಸಂಜೆ 7.30ಕ್ಕೆ ಸಂಚರಿಸಲಿದೆ.

Comments