ಕೊರೊನಾ ಸಾವು ಪ್ರಕರಣವನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ; ಯು ಟಿ ಖಾದರ್ಮಂಗಳೂರು; ಕೊರೊನಾ ಪ್ರಕರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ ಎಂದು ಯು ಟಿ ಖಾದರ್ ಜಿಲ್ಲಾಡಳಿತಕ್ಕೆ ಹೇಳಿದ್ದಾರೆ.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ದಿಂದ ದ.ಕ‌ ಜಿಲ್ಲೆಯಲ್ಲಿ 5 ಸಾವು ಆಗಿದೆ.ಜಿಲ್ಲಾಡಳಿತ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಪಾಸಿಟಿವ್ ಆದ ಮೂರು ದಿನದಲ್ಲಿ ಸಾಯುತ್ತಾರೆ.ಮಂಗಳೂರಿನಲ್ಲಿ ಜನರ ಜೀವಕ್ಕೆ ಬೆಲೆ ಇಲ್ವಾ.ಜಿಲ್ಲಾಡಳಿತ ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬಾರದು.ಜನರು ಸಾವುಗೀಡಾಗಿರೋದಕ್ಕೆ ಕಾರಣ ಏನು?.ಇದನ್ನು ಆರೋಗ್ಯ ಇಲಾಖೆ ತನಿಖೆ ಮಾಡಲಿ.ಒಬ್ಬ ಸೋಂಕಿತ ಸತ್ರೆ 150 ಜನರಿಗೆ ಸೋಂಕು ತಗಲುತ್ತದೆ.ಇದು ವೈದ್ಯಕೀಯ ಅಧ್ಯಯನ ದಿಂದ ಧೃಡಪಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಮೂಲವನ್ನೇ ಪತ್ತೆ ಹಚ್ಚಲು ಆಗಿಲ್ಲ.ಯಾವುದೇ ವಿಚಾರದಲ್ಲೂ ಜಿಲ್ಲಾಡಳಿತ ದಲ್ಲಿ ಸ್ಪಷ್ಟತೆ ಇಲ್ಲ.ಜನರಿಗೆ ಕಿಟ್ ಕೊಟ್ರೆ ವೈರಸ್ ಹೋಗೋದಿಲ್ಲ.ವೈರಸ್ ನಿಯಂತ್ರಣ ಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ

Comments