ಸುರತ್ಕಲ್ ಪ್ರದೇಶ ಸೀಲ್ ಡೌನ್; ದ.ಕ ಜಿಲ್ಲಾಧಿಕಾರಿಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕೊರೊನಾ ಕಾಣಿಸಿಕೊಂಡ 16 ಮಂದಿಯಲ್ಲಿ ಓರ್ವರು ಮಂಗಳೂರಿನ ಸುರತ್ಕಲ್ ನವರಾಗಿದ್ದು ಅವರ ನಿವಾಸದ ಸುರತ್ಕಲ್ ನ ಸುತ್ತಲಿನ ಪ್ರದೇಶ ಸೀಲ್ ಡೌನ್ ಮಾಡಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 12 ರಂದು 179 ಮಂದಿ ವಿಮಾನದಲ್ಲಿ ಬಂದಿದ್ದಾರೆ.125 ಜನ ಮಂಗಳೂರಿನಲ್ಲಿ ಕ್ವಾರೆಂಟೈನಲ್ಲಿದ್ದರು.ಇದರಲ್ಲಿ 15 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೊತೆಗೆ ಸುರತ್ಕಲ್ ಮೂಲದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಆದುದರಿಂದ ಸುರತ್ಕಲ್ ಪ್ರದೇಶ್ ಕಂಟೋನ್ಮೆಂಟ್ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ

Comments