ಗರ್ಭಿಣಿ ಹೊಟ್ಟೆಯಲ್ಲಿ ಮಗು ಸಾವು ಪ್ರಕರಣ: ಅಪಾರ್ಟ್ ಮೆಂಟ್ ಗೆ ನೋಟಿಸ್

ಮಂಗಳೂರು: ದುಬೈ ನಿಂದ ಹೆರಿಗೆಗ ಬಂದಿದ್ದ ಮಹಿಳೆಯೊಬ್ಬರ ಹೊಟ್ಟೆಯಲ್ಲಿಯೆ ಮಗು ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ  ಮಂಗಳೂರಿನ ಅಪಾರ್ಟ್ ಮೆಂಟ್ ಗೆ ನೋಟಿಸ್ ಜಾರಿ ಮಾಡಿದೆ.
ಮಂಗಳೂರಿನ ಶಿವಭಾಗ್ ನಲ್ಲಿರುವ ಶಿವದೀಪ್ ಅಪಾರ್ಟ್ ಮೆಂಟ್ ಗೆ  ನೋಟಿಸ್ ನೀಡಲಾಗಿದೆ. ಈ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಮಹಿಳೆಗೆ ಬರಲು ಅವಕಾಶ ನೀಡಿರಲಿಲ್ಲ. ವಿದೇಶದಿಂದ ಬಂದ ಗರ್ಭಿಣಿಯರಿಗೆ ಮೊದಲ ಕೋವಿಡ್ ಟೆಸ್ಟ್ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಲು ಸರಕಾರ ನಿರ್ಧರಿಸಿತ್ತು. ಅದರಂತೆ ಗರ್ಭಿಣಿ ಮಹಿಳೆ ಅಪಾರ್ಟ್ ಮೆಂಟ್ ಗೆ ಬರಲು ನಿರ್ಧರಿಸಿದಾ ಅಪಾರ್ಟ್ ಮೆಂಟ್ ಅಸೋಸಿಯೆಶನ್ ಇದನ್ನು ನಿರಾಕರಿಸಿತ್ತು. ಹೀಗಾಗಿ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಮಗು ಹೊಟ್ಟೆಯಲ್ಲಿ ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಗೆ ಪಾಲಿಕೆ ನೋಟಿಸ್ ಜಾರಿ ಮಾಡಿದೆ

Comments